ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ದೇಶದ್ರೋಹಿ, ಭ್ರಷ್ಟಾಚಾರಿಗಳ ಪಕ್ಷ: ಎನ್. ರವಿಕುಮಾರ್

ಬೆಂಗಳೂರು: ಕಾಂಗ್ರೆಸ್ ದೇಶದ್ರೋಹಿಗಳ ಮತ್ತು ಭ್ರಷ್ಟಾಚಾರಿಗಳ ಪಕ್ಷ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿನ್ನೆ ರಾಹುಲ್ ಗಾಂಧಿಯವರು ಕರ್ನಾಟಕ ಸರಕಾರವನ್ನು 40 ಶೇಕಡಾ ಕಮಿಷನ್ ಸರಕಾರ ಎಂದು ಹೇಳಿದ್ದಾರೆ. ಕಬ್ಬಿಣದ ಕಾಲಿನ ರಾಹುಲ್ ಗಾಂಧಿ ಅವರು ಇದಕ್ಕೆ ಆಧಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಲೋಕಾಯುಕ್ತಕ್ಕೆ ದಾಖಲೆ ಕೊಡಲಿ. ಪೊಲೀಸರಿಗೆ ಕೊಡಬಹುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿದ್ದಾರೆ. ಆದರೂ ಕೂಡ ಸಾಕ್ಷ್ಯಾಧಾರ ಇಲ್ಲದ ಕಾರಣ ದೂರು ಸಲ್ಲಿಸಲು ಆಗುತ್ತಿಲ್ಲ. ಒಂದು ರೀತಿಯಲ್ಲಿ ಬೀದಿಯಲ್ಲಿ ಹೋಗುವ ರಾಮಣ್ಣ, ಸೋಮಣ್ಣನ ಹಾಗೆ ಕಬ್ಬಿಣದ ಕಾಲಿನ ರಾಹುಲಣ್ಣನೂ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಹೆಸರಾಂತ ಪ್ರಧಾನಮಂತ್ರಿಗಳ ಕುಟುಂಬ ಹಾಗೂ ಹೆಸರಾಂತ ಗಾಂಧಿ ಕುಟುಂಬದಿಂದ ಬಂದ ಅವರಿಗೆ ಇಷ್ಟೊಂದು ಕನಿಷ್ಠ ಜ್ಞಾನ ಇಲ್ಲವೇ? ಎಂದು ಪ್ರಶ್ನಿಸಿದರಲ್ಲದೆ ಈ ಧೋರಣೆಯನ್ನು ಬಿಜೆಪಿ ಖಂಡಿಸುತ್ತದೆ ಎಂದು ತಿಳಿಸಿದರು.

*ಭಾರತ್ ಜೋಡೋ ಯಾತ್ರೆಯ ರಾಹುಲ್ ಗಾಂಧಿಯವರೇ ಈ 10 ಪ್ರಶ್ನೆಗಳಿಗೆ ಉತ್ತರಿಸಿ:*

1) ನಿಮ್ಮ ಪಾದಯಾತ್ರೆ ಪಾಪದ ಪ್ರಾಯಶ್ಚಿತ್ತದ್ದಾ?

2) ನಿಮ್ಮ ಒಡೆದು ಹೋಗಿರುವ ಮನಸ್ಸುಗಳಿಂದ, ಒಡೆದು ಹೋಗಿರುವ ನಿಮ್ಮ ಪಕ್ಷದಿಂದ ಭಾರತವನ್ನು ಜೋಡಿಸಲು ಸಾಧ್ಯವಾ?

3) 1919ರ ಖಿಲಾಫತ್ ಚಳುವಳಿಯಿಂದ ಹಿಡಿದು ಬಾರತ-ಪಾಕಿಸ್ತಾನ, ಭಾರತ-ಬಾಂಗ್ಲಾ, ಕಾಶ್ಮೀರಕ್ಕೆ 370ನೇ ವಿಧಿ, ವಂದೇ ಮಾತರಂ ವಿಭಜನೆ, ಹೀಗೆ ಮೊನ್ನೆನೊನ್ನೆಯ ಸಿ.ಎ.ಎ.ಕಾಯಿದೆಯವರೆಗೆ ನಿಮ್ಮದು ಹಿಂದೂಗಳನ್ನು ಅನಾಥರನ್ನಾಗಿಸುವ ಭಾರತದ ಐಕ್ಯತೆಯನ್ನು ಭಗ್ನಗೊಳಿಸಿದ ತೋಡೋ ಯಾತ್ರೆ ಇದಲ್ಲವೇ?

4) ದೇಶವನ್ನು ಲೂಟಿ ಮಾಡಿದವರು ನಿಮ್ಮ ಪಕ್ಷ ನಿಮ್ಮ ಕುಟುಂಬವರಲ್ಲವೇ?

5) ನಿಮ್ಮದು "ಒಳಗೆ ಭಾರತ ತೋಡೋ ಹೊರಗೆ ಭಾರತ ಜೋಡೋ ಒಳಗೆ ಭ್ರಷ್ಟಾಚಾರದ ಪರ ಹೊರಗೆ ಭ್ರಷ್ಟಾಚಾರ ವಿರೋಧಿ" ಇಂತಹ ಆತ್ಮ ವಂಚನೆ ನಿಮಗೇಕೆ?

6) ಕರ್ನಾಟಕದಲ್ಲಿ ನಿಮ್ಮ ಪಕ್ಷದ ಡಿ.ಕೆ.ಶಿವಕುಮಾರ್- ಸಿದ್ಧರಾಮಯ್ಯ ಅವರನ್ನು ಜೋಡಿಸಲಾಗದ ನಿಮಗೆ ಭಾರತವನ್ನು ಜೋಡಿಸಲು ಸಾಧ್ಯವೇ? ನೀವು ಕರ್ನಾಟಕದ ಕಾಂಗ್ರೇಸನ್ನು ಜೋಡಿಸಬಲ್ಲಿರಾ?

7) ಭಾರತೀಯರು ಕಾಂಗ್ರೆಸ್ ಮುಕ್ತ ಭಾರತವನ್ನು ಬಯಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನೇ ಜೋಡಿಸಲಾರದ ನಿಮ್ಮಿಂದ ಭಾರತವನ್ನು ಜೋಡಿಸುವುದು ಸಾಧ್ಯವೇ? ಕಾಂಗ್ರೆಸ್ ಜೋಡೋ ಯಾತ್ರೆಗೇಕೆ ಭಾರತಜೋಡೋ ಎಂದು ಕರೆದಿದ್ದೀರಿ?

8) ಆತ್ಮಸಾಕ್ಷಿಯಿಂದ ಹೇಳಿ ಇದು ನಿಮ್ಮ ಆತ್ಮವಂಚನೆಯ ಪಾದಯಾತ್ರೆ ಅಲ್ಲವೇ? ನಿಮ್ಮ ಪಕ್ಷದ ಇತಿಹಾಸ ನೋಡಿದರೆ ಅಂದಿನ ಮೂರ್ತಿ ಭಂಜಕರಿಗೂ ಇಂದಿನ ಭಾರತ ಭಂಜಕರಿಗೂ ಏನು ವ್ಯತ್ಯಾಸವಿದೆ? ಮೂರ್ತಿ ಭಂಜಕರಂತೆ ನೀವು ಭಾರತ ಭಂಜಕರಾಗಬಾರದಲ್ಲವೇ?

9) ನಿಮಗೆ ನಿಮ್ಮ ಪಕ್ಷಕ್ಕೆ ಭಾರತವನ್ನು ಜೋಡಿಸುವ ಪ್ರಾಮಾಣಿಕ ಉದ್ದೇಶವಿದ್ದರೆ ಮುಂದಿನ ಚುನಾವಣೆಯಲ್ಲಿ ಸಮಾನತೆಯನ್ನು ತರಲು ಹಿಂದು-ಮುಸ್ಲಿಂ ಸಮಾನರೆಂಬ ಕಾನೂನನ್ನು ತರುತ್ತೇವೆ ಎಂದು ಘೋಷಿಸುತ್ತೀರಾ?

10) ನೀವು ಈಗಾಗಲೇ ಪ್ರತ್ಯೇಕತೆಯ ಬೀಜ ಬಿತ್ತಿ, ಭಾರತದಲ್ಲಿ ರಕ್ತಪಾತಕ್ಕೆ ಕಾರಣರಾಗಿದ್ದೀರಿ. ಮುಸ್ಲಿಂ ಲೀಗ್ ಕಮ್ಯುನಿಸ್ಟ್ ಹಾಗೂ ದೇಶವಿರೋಧಿಗಳ ಸಹವಾಸದಿಂದ ನಿಮ್ಮ ಪಕ್ಷ ದೇಶದ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ನಿಮ್ಮಲ್ಲಿರುವ ನಾಯಕರೇ ಕಾಂಗ್ರೆಸ್ ಛೋಡೋ ಯಾತ್ರೆ ಆರಂಭಿಸಿದ್ದಾರೆ. ಈಗ ನಿಮ್ಮೊಡನೆ ಭಾರತವನ್ನು ಜೋಡಿಸುವ ಯಾವ ಸಿದ್ಧಾಂತ ಯಾವ ಆದರ್ಶವಾದಿ ಪಕ್ಷ ಯಾವ ಪ್ರಾಮಾಣಿಕತೆ ನಿಮಗಿದೆ?

Edited By : PublicNext Desk
Kshetra Samachara

Kshetra Samachara

02/10/2022 04:22 pm

Cinque Terre

578

Cinque Terre

0

ಸಂಬಂಧಿತ ಸುದ್ದಿ