ಬೆಂಗಳೂರು: ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಗುಂಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದಲ್ಲಿರುವ 47 ಮೇಲ್ಸೇತುವೆಗಳ ಸದೃಢತೆ ಪರೀಕ್ಷೆ ನಡೆಸಲು ಪಾಲಿಕೆ ಮುಂದಾಗಿದೆ.
ಈ ಕುರಿತು ಮಾತನಾಡಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರದಲ್ಲಿನ 47 ಮೇಲ್ಸೇತುವೆಗಳಿವೆ. ಅವುಗಳಲ್ಲಿ ಹಲವು ಮೇಲ್ಸೇತುವೆಗಳ ರಸ್ತೆಯಲ್ಲಿ ಗುಂಡಿ ಬಿದ್ದು ಆತಂಕ ಸೃಷ್ಟಿಯಾಗುತ್ತಿದೆ.
ಇನ್ಪ್ರಾ ಸಪೋರ್ಟ್ ಹೆಸರಿನ ಸಂಸ್ಥೆಯು ಈ ಹಿಂದೆಯೂ ಮೇಲ್ಸೇತುವೆಗಳ ಸದೃಢತೆಯನ್ನು ಪರೀಕ್ಷಿಸಲಾಗಿತ್ತು. ಆ ವೇಳೆ ಎಲ್ಲ ಮೇಲ್ಸೇತುವೆಗಳ ಸದೃಢತೆ ಸಮರ್ಪಕವಾಗಿ ವರದಿ ನೀಡಿತ್ತು.
ಇದೀಗ ಮತ್ತೊಮ್ಮೆ ಎಲ್ಲ ಮೇಲ್ಸೇತುವೆಗಳ ಸದೃಢತೆ ಪರೀಕ್ಷೆಗೆ ಇನ್ಪ್ರಾ ಸಪೋರ್ಟ್ ಸಂಸ್ಥೆಗೆ ಸೂಚಿಸಿ, ಡಿಸೆಂಬರ್ ಒಳಗೆ ವರದಿ ನೀಡುವಂತೆ ತಿಳಿಸಲಾಗುವುದು. ವರದಿ ಬಂದ ನಂತರ ಸದೃಢತೆಯಲ್ಲಿ ಲೋಪ ಕಂಡು ಬಂದಿದ್ದರೆ, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
Kshetra Samachara
22/09/2022 10:33 pm