ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕಿನ ಮಹದೇವಪುರ ಕ್ಷೇತ್ರದಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿನ ಸಮಸ್ಯೆಗಳ ನಿವಾರಣೆಗಾಗಿ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ.
ಮಹದೇವಪುರ ಕ್ಷೇತ್ರದ ಪ್ರತಿ ವಾರ್ಡಗೂ ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್‌ಬಿ ಮತ್ತು ಬೆಸ್ಕಾಂ, ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಒಳಗೊಂಡ ತಂಡಗಳು ರಚನೆ ಮಾಡಲಾಗಿದೆ.
ಮಳೆ ನೀರು ಹೊರ ಹಾಕುವುದು, ಹೂಳು ತೆಗೆಯುವುದು, ವಿದ್ಯುತ್ ಸಂಬಂಧಿ ತೊಂದರೆಗಳನ್ನು ಸರಿಪಡಿಸುವುದು, ಕಾಯಿಲೆ ಹರಡದಂತೆ ಅವಶ್ಯಕ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಹೀಗೆ ಜನರಿಗೆ ಬೇಕಾದ ಎಲ್ಲಾ ಅವಶ್ಯಕ ಸಹಾಯವನ್ನು ಈ ತಂಡಗಳು ಒದಗಿಸಲಿವೆ.
Kshetra Samachara
10/09/2022 09:57 pm