ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾರತಹಳ್ಳಿಯ ಶಾಸಕ ಅರವಿಂದ ಲಿಂಬಾವಳಿ ಅವರ ಕಛೇರಿಯಲ್ಲಿ ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್‌ಬಿ, ಆರೋಗ್ಯ, ಕಂದಾಯ ಹಾಗೂ ಇತರೆ ಅಧಿಕಾರಿಗಳೊಂದಿಗೆ ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ಕೈಗೊಳ್ಳಬೇಕಾದ ತುರ್ತು ಸಭೆ ನಡೆಸಲಾಯಿತು.
ಮಹದೇವಪುರ ಕ್ಷೇತ್ರದಲ್ಲಿನ ಎಲ್ಲಾ ಕೆರೆಗಳೂ ತುಂಬಿದ್ದು, ಮಳೆ ಇನ್ನೂ ಮುಂದುವರೆದ ಕಾರಣ ಸುಮಾರು 145 ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇಂದು ನಡೆದ ಸಭೆಯಲ್ಲಿ ವಾರ್ಡ್‌ವಾರು ತಂಡಗಳನ್ನು ರಚಿಸಿ ಅದರ ಮೂಲಕ ಜನರಿಗೆ ಅನುಕೂಲವಾಗುವಂತೆ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸೂಚಿಸಲಾಯಿತು.
ಸಭೆಯಲ್ಲಿ ಬಿಬಿಎಂಪಿ ವಲಯ ಆಯುಕ್ತ ತ್ರಿಲೋಕಚಂದ್ರ, ತಹಶೀಲ್ದಾರ್ ಅಜಿತ್ ರೈ, ಜಂಟಿ ಆಯುಕ್ತರಾದ ಶ್ರೀ ವೆಂಕಟಾಚಲಪತಿ, ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ, ನಗರ ಮಂಡಲ ಅಧ್ಯಕ್ಷರಾದ ಮನೋಹರ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಶ್ರೀ ಬಿ ಎನ್ ನಟರಾಜ್, ಮಹಾದೇವಪುರ ಟಾಸ್ಕ್ ಫೋರ್ಸ್ ಅಧ್ಯಕ್ಷರಾದ ಕ್ಲೆಮೆಂಟ್ ಜಯಕುಮಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.
Kshetra Samachara
10/09/2022 08:59 pm