ಗದಗ : ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಹಾಗೂ ಬಡ್ನಿ ರಸ್ತೆಯ ಮಧ್ಯಭಾಗದಲ್ಲಿ ಕೋಳಿ ಸಾಗಿಸುತ್ತಿದ್ದ ವಾಹನ ಒಂದು ರಸ್ತೆಯಲ್ಲಿ ಸಿಲುಕಿಕೊಂಡದ್ದ ಪರಿಣಾಮವಾಗಿ ವಾಹನದಲ್ಲಿ ಇದ್ದ ಕೋಳಿಯ ಬಾಕ್ಸ್ ಗಳು ಉರುಳಿ ಬಿದ್ದು ಕೋಳಿಗಳು ಚೆಲ್ಲಾಪಿಲ್ಲಿಯಾದ ಘಟನೆ ಜರುಗಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿದ್ದರಿಂದ ರಸ್ತೆಗಳು ದೊಡ್ಡದೊಡ್ಡ ಗುಂಡಿಗಳಾಗಿ ಮಾರ್ಪಟ್ಟಿದೆ. ಇದರಿಂದ ಅಧಿಕಾರಿಗಳು ತಾತ್ಕಾಲಿಕವಾಗಿ ಅದೇ ಗುಂಡಿಗಳನ್ನು ಮುಚ್ಚಿಸಿದ್ದಾರೆ.ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ರಸ್ತೆಯ ಮೇಲೆ ನೀರು ನಿಂತುಕೊಂಡು ಕೆಸರಿನಿಂದ ಕೊಡಿದೆ ಆದರಿಂದ ಕೋಳಿ ತುಂಬಿಕೊಂಡು ಬಂದ ವಾಹನವೊಂದು ಕೆಸರಿನಲ್ಲಿ ಸಿಲುಕಿಕೊಂಡು ಕೋಳಿಯ ಬಾಕ್ಸ್ ಗಳು ರಸ್ತೆಯ ಮೇಲೆ ಬಿದ್ದಿದ್ದರಿಂದ ವಾಹನ ಸವಾರರು ಪರದಾಡಿದರು.
ಲಕ್ಷ್ಮೇಶ್ವರ ಪಟ್ಟಣದಿಂದ ಅಡರಕಟ್ಟಿ ಮಾರ್ಗವಾಗಿ ಬಡ್ನಿ,ಆದರಹಳ್ಳಿ, ದೇವಿಹಾಳ,ಬೆಳಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಸಂಪೂರ್ಣ ಹದಗೆಟ್ಟು ಹೋಗಿದರಿಂದ ವಾಹನ ಸವಾರರು ಹಾಗೂ ಜನರು ಓಡಾಡುವುದು ಕಷ್ಟವಾಗಿದೆ.
Kshetra Samachara
02/09/2022 04:35 pm