ಬೆಂಗಳೂರು: ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರ ತಂದೆ ಅಂಜಿನಪ್ಪ ನಿಧನ ಹೊಂದಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಸಚಿವರಿಗೆ ಸಾಂತ್ವನ ಹೇಳಿದರು.
ಹಲವು ದಿನಗಳಿಂದ ಸಹಜ ವಯೋ ಕಾಯಿಲೆಯಿಂದ ಆಂಜಿನಪ್ಪ ಬಳಲುತ್ತಿದ್ದರು ಎನ್ನಲಾಗಿದೆ. ಮೃತ ಆಂಜಿನಪ್ಪನಿಗೆ ಸಚಿವ ಬೈರತಿ ಬಸವರಾಜ ಸೇರಿದಂತೆ ಐದು ಜನ ಗಂಡು ಮಕ್ಕಳು ಹಾಗೂ ಮೂರು ಜನ ಹೆಣ್ಣು ಮಕ್ಕಳು ಆಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಸಚಿವರ ಸ್ವಗ್ರಾಮವಾದ ಬೈರತಿಯಲ್ಲಿ ವಿಧಿ ವಿಧಾನಗಳೊಂದಿಗೆ ಜರುಗಿತು.
PublicNext
14/08/2022 08:12 pm