ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ಬಳಗೆರೆಯ ಶೋಭಾ ಡ್ರೀಮ್ ಎಕರ್ಸ್‌ನಲ್ಲಿ ಆರ್‌ಡಬ್ಲ್ಯೂಎ ರಿಸೈಕಲ್ ಪಾಯಿಂಟ್ ನ್ನು ಶಾಸಕ ಅರವಿಂದ ಲಿಂಬಾವಳಿ ಉದ್ಘಾಟಿಸಿದರು..
ಇದು ಭಾರತದಲ್ಲೇ ಒಣಕಸ ನಿರ್ವಹಣೆಗೆ ಸ್ಥಾಪಿಸಲಾಗಿರುವ ಅತ್ಯಂತ ನವೀನ ತಂತ್ರಜ್ಞಾನದ ಪ್ರಪ್ರಥಮ ಘಟಕವಾಗಿದ್ದು, ಇದರಿಂದ ಒಣಕಸದ 100% ಮರುಬಳಕೆ ಸಾಧ್ಯವಿದೆ. ಸಂಸ್ಥೆಯವರು ಇದೇ ವರ್ಷ ಬೆಂಗಳೂರಿನ ಗೇಟೆಡ್ ಕಮ್ಯುನಿಟಿಗಳಲ್ಲಿ ಈ ತಂತ್ರಜ್ಞಾನದ ಆಧಾರದ ಮೇಲೆ 20 ಘಟಕಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ.
ಈ ಕಾರ್ಯಕ್ರಮದಲ್ಲಿ ವೇಸ್ಟ್ ಮ್ಯಾನೇಜ್ಮೆಂಟ್ ತಜ್ಞರಾದ ಶ್ರೀ ಎನ್. ಎಸ್. ರಮಾಕಾಂತ್, ಸಂಸ್ಥೆಯ ನಿರ್ದೇಶಕರಾದ ಶ್ರೀ ಅಫ್ಸರ್ ಅಹ್ಮದ್ ಮೊಹಮ್ಮದ್ ಉಪಸ್ಥಿತರಿದ್ದರು.
Kshetra Samachara
08/08/2022 07:24 pm