ಬೆಂಗಳೂರು: ಶೋಕಿ, ಮೋಜು ಮಸ್ತಿಗಾಗಿ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ವೈಟ್ ಫೀಲ್ಡ್ ವಿಭಾಗದ ಕೆಆರ್ ಪುರ ಪೊಲೀಸರು ಬಂಧಿಸಿದ್ದಾರೆ.
ಶೋಯಬ್ ಖಾನ್ ಬಂಧಿತ ಆರೋಪಿ. ಆರೋಪಿಯು ವೈಟ್ ಫೀಲ್ಡ್, ಕೆಆರ್ ಪುರ, ರಾಮಮೂರ್ತಿ ನಗರ, ಮಹದೇವಪುರ, ಹೆಚ್.ಎ.ಎಲ್, ಬೈಯ್ಯಪ್ಪನಹಳ್ಳಿ, ಹೆಣ್ಣೂರು, ಮಡಿವಾಳ, ಸಿದ್ಧಪುರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿ ನಿರ್ಜನ ಪ್ರದೇಶದಲ್ಲಿ ಪಾರ್ಕಿಂಗ್ ಮಾಡುತ್ತಿದ್ದನು.
ಕೆಲ ದಿನಗಳ ನಂತರ ಅವುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು ಮಸ್ತಿ ಮಾಡಿಕೊಂಡಿದ್ದನು. ಆರೋಪಿಯಿಂದ ಸುಮಾರು 9 ಲಕ್ಷ ರೂಪಾಯಿ ಬೆಲೆಬಾಳುವ 19 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
Kshetra Samachara
07/08/2022 03:45 pm