ಬೆಂಗಳೂರು: ವ್ಯಕ್ತಿಯೋರ್ವನನ್ನು ಅಪಹರಿಸಿ ಹಣದ ಬೇಡಿಕೆಯಿಟ್ಟಿದ್ದ ಆರೋಪಗಳನ್ನು ವೈಟ್ ಫೀಲ್ಡ್ ವಿಭಾಗದ ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ..
ಹೂಡಿಯ ಬಸವಣ್ಣ ನಗರದ ನಿವಾಸಿ ಸಿದ್ದಪ್ಪ ಎಂಬುವವರನ್ನು ಕಳೆದ ಕೆಲ ದಿನಗಳ ಹಿಂದೆ ಗ್ಯಾಂಗ್ ವೊಂದು ಅಪಹರಿಸಿ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಎರಕಲಚೇರವು ಗ್ರಾಮದಲ್ಲಿ ಕೂಡಿಯಿಟ್ಟಿದ್ದಾರೆ.
ಬಳಿಕ ಸಿದ್ದಪ್ಪ ಅವರ ಪತ್ನಿ ಚಂದ್ರಮ್ಮ ಅವರಿಗೆ ಕರೆ ಮಾಡಿ ಐವತ್ತು ಲಕ್ಷ ರೂಪಾಯಿಗಳ ಹಣದ ಬೇಡಿಕೆಯಿಟ್ಟಿದ್ದಾರೆ.. ಭಯಭೀತರಾದ ಚಂದ್ರಮ್ಮ ಮಹದೇವಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು..ಪ್ರಕರಣ ದಾಖಲಿಸಿಕೊಂಡ ಮಹದೇವಪುರ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳನ್ನು ಎಡೆಮೂರಿ ಕಟ್ಟಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಇಂದ್ರದೇವ್, ದಡ್ಡಿಕಟ್ಟಿ ಮಲ್ಲಿಕಾರ್ಜುನ, ಭೋಯಾ ಮದನ್ ಕುಮಾರ್, ಸುಂಕಣ್ಣ, ಪ್ರಶಾಂತ್, ಚಂದ್ರಶೇಖರ ಬಂಧಿತ ಆರೋಪಿಗಳು.. ಮಹದೇವಪುರ ಪೊಲೀಸರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kshetra Samachara
29/06/2022 01:58 pm