ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕಿನ ಮಹದೇವಪುರ ಕ್ಷೇತ್ರದ ನಲ್ಲೂರಹಳ್ಳಿ ಕೆರೆಯನ್ನು ಇತ್ತೀಚೆಗಷ್ಟೇ ಬಹುಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು.
ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಅವರು ಸಹ ಕೆರೆಗೆ ಬಾಗಿನ ಅರ್ಪಿಸಿದ್ದರು.. ಆದರೆ ಈ ಕೆರೆಯಲ್ಲಿ ದಿನಗಳು ಕಳೆದಂತೆ ಗಿಡ ಗಂಟೆಗಳು ಕೆರೆಯನ್ನು ಆವರಿಸುತ್ತಿದೆ. ಇದರಿಂದ ಕೆರೆಯಲ್ಲಿ ಇನ್ನಿತರ ತ್ಯಾಜ್ಯಗಳು ಶೇಖರಣೆ ಆಗುತ್ತಿದ್ದು, ಕೆರೆ ಹದಗೆಡುವ ಹಂತಕ್ಕೆ ತಲುಪುತ್ತಿದೆ. ಅದಷ್ಟೂ ಬೇಗ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆರೆ ಸಂರಕ್ಷಣೆಗೆ ಮುಂದಾಗಬೇಕಾಗಿದೆ.. ಇಲ್ಲದಿದ್ರೆ ಕೆರೆ ಪುನಃ ಕೊಳಚೆ ಗುಂಡಿ ಆಗುವುದು ನಿಶ್ಚಿತವಾಗಿದೆ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
17/06/2022 04:55 pm