ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಕಾಏಕಿ ಗುಂಡಿ ಕಾರ್ಯಾರಂಭ, ವಾಹನ ಸವಾರರ ಪರದಾಟ

ಬೆಂಗಳೂರು: ಕೆ ಆರ್ ಪುರ ಕ್ಷೇತ್ರದ ದೇವಸಂದ್ರದಿಂದ ಹೂಡಿ ಗ್ರಾಮಕ್ಕೆ ಸಾಗುವ ಮುಖ್ಯ ರಸ್ತೆಯಲ್ಲಿ ಬಿಡಬ್ಲ್ಯೂಎಸ್ಎಸ್ ಬಿನ ಅಧಿಕಾರಿಗಳು ಏಕಾಏಕಿ ರಸ್ತೆ ಆಗೆದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ.

ದೇವಸಂದ್ರದ ಮುಖರಸ್ತೆಯಲ್ಲಿ ಗುಂಡಿ ಆಗೆದ ಪರಿಣಾಮ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.. ಇದರಿಂದ ವಾಹನ ಸವಾರರು ಹರಸಾಹಸ ಪಡುವಂತ ಸ್ಥಿತಿ ನಿರ್ಮಾಣವಾಗಿದೆ.

ಮೊದಲೇ ಇಲ್ಲಿನ ರಸ್ತೆ ಅತಿ ಕಿರಿದಾದ ಕಾರಣ ಭಾರೀ ಪ್ರಮಾಣದ ವಾಹನಗಳು ಸಂಚರಿಸುತ್ತಿರುತ್ತವೆ.. ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆ ಇದಾಗಿರುವ ಕಾರಣ ಬೃಹತ್ ವಾಹನಗಳಿಂದ ಹಿಡಿದು ಸಣ್ಣ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ.

ಮುಂಜಾಗ್ರತವಾಗಿ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸದೆ ಏಕಾಏಕಿ ರಸ್ತೆಯಲ್ಲಿ ಕಾಮಗಾರಿ ಆರಂಭ ಗೊಳಿಸಿದ್ದು ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

Edited By : PublicNext Desk
Kshetra Samachara

Kshetra Samachara

13/06/2022 09:46 pm

Cinque Terre

424

Cinque Terre

0

ಸಂಬಂಧಿತ ಸುದ್ದಿ