ಬೆಂಗಳೂರು: 15ನೇ ಶತಮಾನದಲ್ಲಿ ರಾಜರ ಕಾಲದಲ್ಲಿ ಕೃಷ್ಣರಾಜಪುರದ ವೆಂಗಯ್ಯನಕೆರೆ ಬಳಿ ನೆಲೆಸಿರುವ ಮಹಾಬಲೇಶ್ವರ ಸ್ವಾಮಿ ಮತ್ತು ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ದೇವಸ್ಥಾನ ಜೀರ್ಣೋದ್ದಾರ ಶಂಕುಸ್ಥಾಪನೆ ಭೂಮಿ ಪೂಜೆಯನ್ನ ಇಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ನೆರವೇರಿಸಿದರು.
ಸೂಮಾರು 20 ಕೋಟಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದೇವಲಯಕ್ಕೆ ದಾನಿಗಳು ಮುಂದಾಗಿದ್ದು ಎರಡು ಗಂಟೆಗಳ ಒಳಗೆ ಸುಮಾರು 5 ಕೋಟಿ ರೂಪಾಯಿ ದೇಣಿಗೆಯನ್ನ ಸಂಗ್ರಹಿಸಲಾಯಿತು. ದೇವಸ್ಥಾನ ಅಧ್ಯಕ್ಷರಾದ ರಾಜು ಅವರ ಸಮ್ಮುಖದಲ್ಲಿ ಮಹಬಲೇಶ್ವರ ಸ್ವಾಮಿ ಭಕ್ತರು, ಉದ್ಯಮಿಗಳು ತಮ್ಮ ಕೈಲಾದ ಸಹಾಯದಿಂದ ಮಾಡಿದ್ದಾರೆ.ಮುಜರಾಯಿ ಇಲಾಖೆಯಿಂದ ಒಂದು ಕೋಟಿ ರೂಪಾಯಿ ನಿಡಲಾಗಿದೆ .ಸಚಿವ ಬೈರತಿ ಬಸವರಾಜ್ ಕೂಡ ಸಹಾಯ ಮಾಡುವುದಾಗಿ ಹೇಳಿದರು.
ಭೂಮಿ ಪೂಜೆ ನಂತರ ಮಾತನಾಡಿದ ಸಚಿವ ಬೈರತಿ ಬಸವರಾಜ್, ಈ ದೇವಸ್ಥಾನ ನಮ್ಮ ಕೆ.ಆರ್ ಪುರ ಕ್ಷೇತ್ರಕ್ಕೆ ಕಳಸ ವಿದ್ದಂತೆ ಅದರಿಂದ 20ಕೋಟಿ ವೆಚ್ಚದಲ್ಲಿ ಸುಂದರವಾದ ಕಲ್ಲಿನಿಂದ ದೇವಾಲಯ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಕ್ಷೇತ್ರದಲ್ಲಿರುವ ಇತಿಹಾಸ ಪ್ರಸಿದ್ಧ ದೇವಾಲಯಗಳಲ್ಲಿ ಈ ದೇವಾಲಯವು ವಿಶೇಷವಾಗಿದ್ದು, ರಾಜಮಹಾರಾಜರು ನಿರ್ಮಾಣ ಮಾಡಿದ್ದು ಈಗ ಜೀರ್ಣೋದ್ಧಾರ ಮಾಡಲು ಭಕ್ತರು ವ್ಯಕ್ತಪಡಿಸಿದ್ದು ದೇವಾಲಯದ ಅಭಿವೃದ್ಧಿಗೆ ದಾನಿಗಳು ಸಹಕಾರ ನೀಡುವಂತೆ ಕೋರಿದರು.ಇತಿಹಾಸ ಪ್ರಸಿದ್ಧ ದೇವಾಲಯಗಳ ಜೀರ್ಣೋದ್ಧಾರ ನನ್ನ ಕರ್ತವ್ಯವಾಗಿದ್ದು ಕ್ಷೇತ್ರದ ಶಾಸಕನಾಗಿ ನಿಮ್ಮೊಂದಿಗೆ ಕೈಜೋಡಿಸುತ್ತೆನೆಂದು ಭರವಸೆ ನೀಡಿದರು.
Kshetra Samachara
12/06/2022 10:40 am