ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 6 ತಿಂಗಳು ಕಳೆದರೂ ಮುಗಿಯದ ಕಾಮಗಾರಿ, ವಾಹನ ಸವಾರರ ಪರದಾಟ

ಬೆಂಗಳೂರು: ಮಹದೇವಪುರ ಕ್ಷೇತ್ರದ ಡೊಡ್ಡಕನ್ನಳಿಯಿಂದ ಸರ್ಜಾಪುರಕ್ಕೆ ಸಾಗುವ ಈ ರಸ್ತೆ ಕಾಮಗಾರಿ ಪ್ರಾರಂಭವಾಗಿ ತಿಂಗಳುಗಳೇ ಕಳೆದ್ರೂ ಕಾಮಗಾರಿ ಮಾತ್ರ ಇನ್ನೂ ಮುಗಿದಿಲ್ಲ.

ಕಳೆದ ಆರು ತಿಂಗಳ ಹಿಂದೆ ಆರಂಭಗೊಂಡ ಬಿಡಬ್ಲ್ಯೂಎಸ್ಎಸ್ ಬಿ ಕಾಮಗಾರಿ ದಿನಗಳು ಮುಗಿದರೂ ಪೂರ್ಣಗೊಂಡಿಲ್ಲ..ಇಲ್ಲಿನ ರಸ್ತೆಗಳು ಕಿರಿದಾಗಿದ್ದು, ಕಾಮಗಾರಿಯಿಂದ ರಸ್ತೆ ಹದಗೆಟ್ಟಿದೆ.

ರಸ್ತೆ ಮೇಲೆಲ್ಲಾ ಬೃಹತ್‌ ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರು ಹರಸಾಹಸ ಪಡುವಂತ ಸ್ಥಿತಿ ನಿರ್ಮಾಣವಾಗಿದೆ.. ಇನ್ನೂ ಈ ಭಾಗದಲ್ಲಿ ಅಲ್ಪ ಮಳೆಯಾದರೂ ಇಡಿ ರಸ್ತೆಗಳೆಲ್ಲ ಕೆಸರು ಗದ್ದೆಯಂತಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

02/06/2022 11:55 am

Cinque Terre

1.78 K

Cinque Terre

0

ಸಂಬಂಧಿತ ಸುದ್ದಿ