ಬೆಂಗಳೂರು: ಚಿನ್ನದ ಸರ ಹಾಗೂ ಮೊಬೈಲ್ ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ವೈಟ್ ಫೀಲ್ಡ್ ವಿಭಾಗದ ಕೆಆರ್ ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಕ್ತಿವೇಲು ಅಲಿಯಾಸ್ ಶಕ್ತಿ (19), ಹಾಗೂ ವಿಜಯ್ (19) ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ ಸುಮಾರು 4.60.000 ಬೆಲೆ ಬಾಳುವ 67 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ ಓಪೋ, ವಿವೋ ಮೊಬೈಲ್ ಸೇರಿದಂತೆ ಒಟ್ಟು 10 ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ..
ಕೆಆರ್ ಪುರ ಪೊಲೀಸರ ಕಾರ್ಯಚರಣೆಗೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kshetra Samachara
30/05/2022 11:55 am