ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಹದೇವಪುರ ಬಿಜೆಪಿ ಕಚೇರಿಯಲ್ಲಿ ವೀರ ಸಾವರ್ಕರ್ ಜಯಂತಿ ಆಚರಣೆ

ಬೆಂಗಳೂರು: ವೀರ ಸಾವರ್ಕರ್ ಜಯಂತಿಯನ್ನು ನಿಮಿತ್ತ ವೀರ ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಮಹದೇವಪುರ ನಗರ ಮಂಡಲದ ಕಾರ್ಯಕಾರಿಣಿ ಸಭೆಯನ್ನು ಶಾಸಕರಾದ ಶ್ರೀ ಅರವಿಂದ ಲಿಂಬಾವಳಿ ಉದ್ಘಾಟಿಸಿದರು..

ಬಳಿಕ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ ಸಂಘಟನೆಯ ಕುರಿತು ಮಾರ್ಗದರ್ಶನ ನೀಡಿ ಪ್ರತಿಯೊಬ್ಬ ಘಟನಾಯಕರು ಸಾರ್ವಜನಿಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವಂತೆ ತಿಳಿಸಿದರು.

ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮತ್ತು ಮುಂಬರುವ ಅಭಿವೃದ್ಧಿ ಕಾಮಗಾರಿಗಳನ್ನು ತಿಳಿಸಿದರು. ಕೇಂದ್ರ ಮತ್ತು ರಾಜ್ಯ ವಿವಿಧ ಕಾಮಗಾರಿಗಳನ್ನು ಮತ್ತು ಮುಂಬರುವ ಚುನಾವಣೆಯಲ್ಲಿ ಹೇಗೆ ಕೆಲಸ ಮಾಡಬೇಕು ಮತ್ತು ಬೂತ್, ವಾರ್ಡ್ ಮತ್ತು ಕ್ಷೇತ್ರದ ಪ್ರತಿಯೊಬ್ಬರನ್ನು ಹೇಗೆ ತಲುಪಬೇಕು ಎಂದು ತಿಳಿಸಿದರು.

ಮಳೆ ನೀರು ಕೊಯ್ಲು - ನಾವು ಮಳೆ ನೀರನ್ನು ಸಂಗ್ರಹಿಸಬೇಕು ಮತ್ತು ಗಿಡಗಳನ್ನು ನೆಡುವ ಕಾರ್ಯಕ್ರಮ ಮಾಡಬೇಕು ತಿಳಿಸಿದರು.

ಈ ಸಭೆಯಲ್ಲಿ ಶ್ರೀ ವೆಂಕಟಸ್ವಾಮಿ ರೆಡ್ಡಿ, ಶ್ರೀ ರಾಜಾ ರೆಡ್ಡಿ, ಶ್ರೀ ಹೆಚ್.ಎಸ್.ಮಂಜುನಾಥ ಪ್ರಭಾರಿ ಮಹದೇವಪುರ ಕ್ಷೇತ್ರ, ಶ್ರೀ. ಬೆಂಗಳೂರು ಕೇಂದ್ರ ಪ್ರಭಾರಿ ಅಶ್ವತ್ಥನಾರಾಯಣರಾವ್, ಶ್ರೀ ಬಿ ಎಸ್ ಶ್ರೀಧರ್, ಸುರೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಎಲ್, ಲೋಕೇಶ್ ಕುಮಾರ್, ನಾಗೇಶ್ ರೆಡ್ಡಿ, ಈ ಸಂದರ್ಭದಲ್ಲಿ ವಾರ್ಡಿನ ಎಲ್ಲಾ ಮುಖಂಡರೂ ಹಾಗೂ ಶಕ್ತಿಕೇಂದ್ರದ ಮುಖಂಡರುಗಳು ಭಾಗವಹಿಸಿದ್ದರು ಉಪಸ್ಥಿತರಿದ್ದರು..

Edited By : PublicNext Desk
Kshetra Samachara

Kshetra Samachara

30/05/2022 11:40 am

Cinque Terre

686

Cinque Terre

0

ಸಂಬಂಧಿತ ಸುದ್ದಿ