ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಣ್ಣೂರಲ್ಲಿ ನೂತನವಾದ ಬಿಜೆಪಿ ಪಕ್ಷದ ಕಚೇರಿಯನ್ನು ಶಾಸಕ ಅರವಿಂದ ಲಿಂಬಾವಳಿ ಉದ್ಘಾಟನೆ

ಬೆಂಗಳೂರು: ಮಹದೇವಪುರ ವಿಧಾನ ಸಭಾ ಕ್ಷೇತ್ರದ ಗ್ರಾಮಾಂತರ ಭಾಗದ ಕಣ್ಣೂರು ಗ್ರಾಮದಲ್ಲಿ ಬಿಜೆಪಿ ಪಕ್ಷದ ಕಚೇರಿಯನ್ನು ಶಾಸಕ‌ ಅರವಿಂದ ಲಿಂಬಾವಳಿ ಉದ್ಗಾಟನೆ ‌ಮಾಡಿದರು.

ಕಣ್ಣೂರು ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷರಾದ ಅಶೋಕಗೌಡ ನೇತೃತ್ವದಲ್ಲಿ ನೂತನವಾದ ಬಿಜೆಪಿ ಪಕ್ಷದ ಕಚೇರಿಯನ್ನು ಶಾಸಕ ಅರವಿಂದ ಉದ್ಗಾಟಿಸಿ ಕಛೇರಿಯ ಪೂಜೆಯಲ್ಲಿ ಪಾಲ್ಗೊಂಡರು.

ಕಣ್ಣೂರು ಗ್ರಾಮದ ಊರ ಹಬ್ಬದ ನಿಮಿತ್ತ ಮುಖಂಡರಾದ ಅಶೋಕ್ , ಹರೀಶ್ , ಶಂಕರ್ ಹಾಗೂ ಶ್ರೀನಿವಾಸ್ ಅವರ ಮನೆಗಳಿಗೆ ಭೇಟಿ ನೀಡಿದ ಶಾಸಕ ಅರವಿಂದ ಲಿಂಬಾವಳಿರವರನ್ನು ಅಭಿನಂದಿಸಲಾಯಿತು. ಇದೇ ಸಮಯದಲ್ಲಿ ಕಣ್ಣೂರಿನ Divine mercy school ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದವರನ್ನು ಶಾಸಕರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಅಧ್ಯಕ್ಷ ನಟರಾಜ್, ಕಣ್ಣೂರು ಗ್ರಾ.ಪಂ ಮಾಜಿ ಅಧ್ಯಕ್ಷ ಅಶೋಕ್, ಮುಖಂಡರಾದ ಬಿಳಿಶಿವಾಲೆ ಆನಂದ್, ಮಾರುತಿ, ಜನಾರ್ಧನ್‍ಗೌಡ, ರಾಜೇಶ್, ಕೆ.ವಿ.ನಾಗರಾಜ್, ವೇಣು, ರಮೇಶ್ ಸೇರಿದಂತೆ ಇತರರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

27/05/2022 07:14 pm

Cinque Terre

764

Cinque Terre

0

ಸಂಬಂಧಿತ ಸುದ್ದಿ