ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಡೊಮೆಸ್ಟಿಕ್ ಏರ್​​ಲೈನ್ಸ್​​ಗಳಲ್ಲಿ ಕನ್ನಡ ಮಾಹಿತಿ ಸೇವೆ ಸ್ಥಗಿತ; ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಸಮಾಧಾನ

ಬೆಂಗಳೂರು: ಡೊಮೆಸ್ಟಿಕ್ ಏರ್​​​ಲೈನ್ಸ್​​ಗಳಲ್ಲಿ ಕನ್ನಡದಲ್ಲಿ ಮಾಹಿತಿ ನೀಡುವ ಸೇವೆಯನ್ನು ಸ್ಥಗಿತ‌ ಮಾಡಲಾಗಿದೆ. ಹೀಗಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಜಂಟಿಯಾಗಿ ಕ್ರಮವಹಿಸಿ ಕರ್ನಾಟಕ ರಾಜ್ಯದೊಳಗೆ ಕಾರ್ಯ ನಿರ್ವಹಿಸುವ ಎಲ್ಲಾ ಡೊಮೆಸ್ಟಿಕ್ ಏರ್‌ಲೈನ್ಸ್‌ಗಳಲ್ಲಿ ಕನ್ನಡದಲ್ಲಿಯೇ ಮಾಹಿತಿ ನೀಡುವಂತೆ ಸೂಚಿಸಿದ್ದರು.

ಈ ಜಂಟಿ ಪ್ರಯತ್ನಕ್ಕೆ ಪ್ರತಿಫಲವಾಗಿ ಕರ್ನಾಟಕದಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಸೇವೆ ಒದಗಿಸುವ ಡೊಮೆಸ್ಟಿಕ್ ಏರ್‌ಲೈನ್ಸ್‌ಗಳು ವಿಮಾನಯಾನದ ಪ್ರಯಾಣಿಕರಿಗೆ ಕನ್ನಡದಲ್ಲಿ ಸೇವೆ ಒದಗಿಸುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಡೊಮೆಸ್ಟಿಕ್ ಏರ್‌ಲೈನ್ಸ್‌ಗಳು ಕನ್ನಡದಲ್ಲಿ ಸೇವೆ ಒದಗಿಸುವುದನ್ನು ಸ್ಥಗಿತಗೊಳಿಸಿರುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ಬಂದಿದೆ.

ರಾಜ್ಯದೊಳಗಿರುವ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಾಗಿ ಕನ್ನಡಿಗರೇ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಹೀಗಾಗಿ, ಕರ್ನಾಟಕ ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ರಾಜ್ಯದೊಳಗೆ ಆಂತರಿಕವಾಗಿ ಸಂಚರಿಸುವ ವಿಮಾನಗಳಲ್ಲಿ ವಿಮಾನ ಪ್ರಯಾಣದ ಮಾಹಿತಿ, ವಿಮಾನದೊಳಗಿನ ಸುರಕ್ಷತೆಯ ಮಾರ್ಗಸೂಚಿಗಳು ಸೇರಿದಂತೆ ಇತರ ಎಲ್ಲ ಮಾಹಿತಿಗಳನ್ನು ಕನ್ನಡದಲ್ಲಿ ಒದಗಿಸುವಂತೆ ಸೂಚಿಸಿದೆ.

ಕರ್ನಾಟಕದಲ್ಲಿ ಕನ್ನಡದ ಗ್ರಾಹಕರಿಗೆ ಕನ್ನಡದಲ್ಲಿಯೇ ಸೇವೆ ಒದಗಿಸುವಂತೆ ಅಗತ್ಯ ಕ್ರಮವಹಿಸಲು ರಾಜ್ಯದೊಳಗೆ ಕಾರ್ಯನಿರ್ವಹಿಸುವ ಡೊಮೆಸ್ಟಿಕ್ ಏರ್‌ಲೈನ್ಸ್‌ಗಳಿಗೆ ಸೂಚಿಸುವಂತೆ ಕೋರಿದ್ದಾರೆ. ಹಾಗೆಯೇ, ಈ ಬಗ್ಗೆ ಕ್ರಮಕೈಗೊಂಡು ಪ್ರಾಧಿಕಾರಕ್ಕೆ 15 ದಿನಗಳೊಳಗಾಗಿ ಮಾಹಿತಿ ನೀಡುವಂತೆ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

08/05/2022 02:07 pm

Cinque Terre

718

Cinque Terre

0

ಸಂಬಂಧಿತ ಸುದ್ದಿ