ಬೆಂಗಳೂರು: ಹೈಕೋರ್ಟ್‌ನ ರಿಟ್ ಮತ್ತು ಪ್ರಾಸಿಕ್ಯೂಷನ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪದ ಹಿನ್ನೆಲೆ ಪಿಎಸ್‌ಐ ಟಿಪ್ಪು ಸುಲ್ತಾನ್ ನಾಯಕವಾಡಿಯನ್ನ ವಿಧಾನಸೌಧ ಡಿಸಿಪಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಹೈಕೋರ್ಟ್ ಆವರಣದಲ್ಲಿನ ಭದ್ರತಾ ವಿಭಾಗದ ಪೊಲೀಸ್ ಠಾಣೆಯಲ್ಲಿ ಐವರು ಸಿಬ್ಬಂದಿ ಮೇಲೆ ಮಂಗಳವಾರ ಸಂಜೆ ದೈಹಿಕ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪಿಎಸ್‌ಐ ಜೊತೆಗೆ ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಎಂ.ಡಿ. ವೆಂಕಟೇಶ್, ಸಿದ್ದಣ್ಣ ಕಳಕೂರು ಮತ್ತು ಶಶಿಕುಮಾರ್ ಎಂಬಾತರನ್ನು ಹೈಕೋರ್ಟ್ ಭದ್ರತಾ ವಿಭಾಗದಿಂದ ವರ್ಗಾವಣೆ ಮಾಡಲಾಗಿದೆ.
ಅಮಾನತು ಮಾಡಲು ಕಾರಣ ಏನು ಎಂಬುದನ್ನು ನೋಡೋದಾದ್ರೆ. ಪೈಲ್‌ಮಿಸ್ಸಿಂಗ್ ಕುರಿತ ವಿಚಾರವಾಗಿ ಮೌಖಿಕವಾಗಿ ಬಂದದೂರಿಗೆ ಪಿಎಸ್ ಐ ಟಿಪ್ಪು ಸುಲ್ತಾನ್ ರಿಟ್ ಮತ್ತು ಪ್ರಾಸಿಕ್ಯೂಷನ್ ವಿಭಾಗದ ಪ್ರಕರಣಗಳ ಲಿಸ್ಟ್ ಮಾಡುವ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ದ ಐವರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ ಕಾನೂನು ಬಾಹಿರವಾಗಿ ವಿಚಾರಣೆ ನಡೆಸಿದ್ದಾರೆ ಎಂಬ ಆರೋಪ ಇದೆ. ಇದೇ ಕಾರಣಕ್ಕೆ ಅಮಾನತ್ತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
Kshetra Samachara
09/03/2022 09:09 pm