ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋವಿಂದರಾಜ ನಗರ: ಮೂಢನಂಬಿಕೆಗೆ ಗುರಿಯಾದ ರಾಷ್ಟ್ರ-ನಾಡದ್ವಜ..!

ಗೋವಿಂದರಾಜ ನಗರ: ರಾಷ್ಟ್ರಧ್ವಜ, ನಾಡಧ್ವಜ ನಮ್ಮ ದೇಶದ, ನಾಡಿನ ಗೌರವ ಹಾಗೂ ಹೆಮ್ಮೆಯ ಸಂಕೇತ. ಆದ್ರೆ ಇಲ್ಲೊಂದು ಕಡೆ ರಾಷ್ಟ್ರ ಧ್ವಜ ಹಾಗೂ ನಾಡಧ್ವಜಕ್ಕೆ ಆಗುತ್ತಿರುವ ಅವಮಾನ ನಿಜಕ್ಕೂ ದುರಂತ. ಅಷ್ಟಕ್ಕೂ ಧ್ವಜಕ್ಕೆ ಇಂತಹ ದುರ್ಗತಿ ಬಂದಿರೋದು ಮೂಢನಂಬಿಕೆಯಿಂದ ಅನ್ನೋದೇ ಅಶ್ಚರ್ಯಕರ ಸಂಗತಿ.

ಹೀಗೆ ಕಸದಂತೆ ಎಲ್ಲೆಂದರಲ್ಲಿ ರಾಷ್ಟ್ರಧ್ವಜ, ನಾಡಧ್ವಜ ಬಿದ್ದಿರೋದು ಗೋವಿಂದರಾಜ ನಗರ ವಾರ್ಡ್ ನ ಭೈರವೇಶ್ವರ ನಗರದಲ್ಲಿ. ಇಲ್ಲಿ ಸುಮಾರು 15 ವರ್ಷಗಳಿಂದ ಪರಿಸ್ಥಿತಿ ಹೀಗೆಯೇ ಇದೆ.. ಈ ಅವಮಾನವನ್ನೂ ನೋಡಿಯೂ ಜನ ಯಾಕೆ ಸುಮ್ಮನಾಗಿದ್ದಾರೆ ಅಂತ ನಮ್ಮ ಪಬ್ಲಿಕ್ ನೆಕ್ಸ್ಟ್ ವರಿದಿಗಾರರು‌ ಮಾಹಿತಿಯನ್ನ ಕೆದಕಿದಾಗ್ಲೆ ಗೊತ್ತಾಗಿದ್ದು, ಒಂದು ಅಚ್ಚರಿಯ ವಿಷಯ.. ಅದೂ ಈ ಭೂಪಟದ ಚಿತ್ರವನ್ನ ಯಾರೇ ಕ್ಲೀನ್ ಮಾಡಿ ಬಾವುಟ ಹಾರಿಸಿದ್ರೂ, ಅವ್ರು ಮರಣ ಹೊಂದುತ್ತಾರಂತೆ.. ಇಲ್ಲಿ ಸರ್ಪ ದೋಷ ಇದೆ, ಈಗಾಗ್ಲೇ 3 ಜನರು ಬಾವುಟ ಹಾರಿಸಿ ತೀರ್ಕೊಂಡಿದ್ದಾರೆ. ಹಾಗಾಗಿ ನಾವು ಇದರ ತಂಟೆಗೆ ಹೋಗ್ತಿಲ್ಲ ಅಂತಾರೆ ಇಲ್ಲಿನ ಸ್ಥಳೀಯರು..

ಅದೇನೇ ಇದ್ರೂ ಕಸದ ಗೂಡಿಂದ ಧ್ವಜಕ್ಕೆ ಮುಕ್ತಿ ಸಿಕ್ಕಿ ಗೌರವ ಕಾಪಾಡಬೇಕಾಗಿದೆ. ಆದ್ರೆ ಇದನ್ನೆಲ್ಲ ನೋಡ್ಕೊಂಡು ಬಿಬಿಎಂಪಿಯವ್ರು ಯಾಕೆ ಸುಮ್ಮನಾಗಿದ್ದಾರೆ? ಇಲ್ಲಿನ‌ ಸ್ಥಳೀಯ ನಾಯಕರು, ಅಧಿಕಾರಿಗಳು ಯಾಕೆ ಕಣ್ಮುಚ್ಚಿ ಕುಳಿತ್ತಿದ್ದಾರೆ? ಅನ್ನೋದೆ ಸದ್ಯದ ಪ್ರಶ್ನೆ.

Edited By :
Kshetra Samachara

Kshetra Samachara

20/04/2022 04:41 pm

Cinque Terre

2.31 K

Cinque Terre

0

ಸಂಬಂಧಿತ ಸುದ್ದಿ