ಹಿಮಾಲಯ ಪರ್ವತದೆಡೆ ಟ್ರಕ್ಕಿಂಗ್ ಗೆ ಹೋಗಿದ್ದ ವೈದ್ಯರೊಬ್ಬರು ನಾಪತ್ತೆಯಾಗಿದ್ದು, ಸಂಪರ್ಕಕ್ಕೆ ಸಿಗದೆ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಈ ಸಂಬಂಧ ವೈದ್ಯ ಚಂದ್ರಮೋಹನ್ ಕುಟುಂಬಸ್ಥರು ಹೈ ಗ್ರೌಂಡ್ಸ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯ ಚಂದ್ರಮೋಹನ್ ವಸಂತನಗರದ ನಿವಾಸಿ. ಬೈಕ್ ನಲ್ಲಿ ಲಾಂಗ್ ಡ್ರೈವ್ ಹೋಗೋದು ಹಾಗೇ ಟ್ರಕ್ಕಿಂಗ್ ಮಾಡುವುದು ಡಾ.ಚಂದ್ರಮೋಹನ್ ಗೆ ಪ್ರಿಯ ಹವ್ಯಾಸವಾಗಿತ್ತು. ಹಿಮಾಲಯ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಬೈಕ್ ಮೂಲಕ ಟ್ರಕ್ಕಿಂಗ್ ಮಾಡುತ್ತಿದ್ದರು.
ಅದೇ ರೀತಿ ಕೆಲ ದಿನಗಳ ಹಿಂದೆ ಹಿಮಾಲಯ ಪರ್ವತಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ, ಜೂನ್ 20 ರಿಂದ ಚಂದ್ರ ಮೋಹನ್ ಸಂಪರ್ಕಕ್ಕೆ ಸಿಕ್ಕಿಲ್ಲ. ಮೊಬೈಲ್ ನಂಬರ್ ಸ್ವಿಚ್ ಆಫ್ ಬರುತ್ತಿದೆ. ಇದರಿಂದ ಆತಂಕಗೊಂಡಿರುವ ಕುಟುಂಬಸ್ಥರು, ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ.
PublicNext
27/06/2022 03:22 pm