ಬೆಂಗಳೂರು ಕರಗದಷ್ಟೆ ಪ್ರಸಿದ್ಧಿಯಾದ ಯಲಹಂಕ ಕರಗ ಎರಡು ದಿನಗಳ ಕಾಲ ನಡೆಯುತ್ತದೆ. ಸೋಮವಾರ ಮುಂಜಾನೆ 4 ಗಂಟೆಗೆ ಯಲಹಂಕ ಕೆರೆಯ ಕಲ್ಯಾಣಿ ಬಳಿ ಗಂಗಮ್ಮ ದೇವರಿಗೆ ಪೂಜೆ ಸಲ್ಲಿಸಿದ ಕರಗ ದೇವರ ಆವಾಹನೆಯಾಗುತ್ತದೆ. ನಂತರ ದ್ರೌಪದಮ್ಮ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ವೀರಗಾರರು ಕಣ್ಗಾವಲಿನಲ್ಲಿ ಹಸಿಕರಗ ಬಂದು ನೆಲೆಸುತ್ತದೆ. ತುಂಬಾ ಭಕ್ತಿ ಮತ್ತು ನಿಷ್ಠೆಯಿಂದ ವ್ರತಧಾರಿ ಹಸಿಕರಗವನ್ನು ಕೈಯಲ್ಲಿ ಹೊತ್ತು ತಂದು ದೇವಸ್ಥಾನದಲ್ಲಿಟ್ಟು ಅಷ್ಟೇ ನಿಷ್ಟೆ ನಿಯಮನುಸಾರ ಪೂಜೆ ಸಲ್ಲಿಸುತ್ತಾರೆ.
ಯಲಹಂಕ ಕೆರೆಯಲ್ಲಿ ಗಂಗಮ್ಮ ದೇವರಿಗೆ ಪೂಜೆ ನಂತರ ಹಸಿಕರಗ ದ್ರೌಪದಮ್ಮ ದೇವಸ್ಥಾನಕ್ಕೆ ಬರುವವರೆಗೂ ವೀರಗಾರರು ಸುಪರ್ದಿಯಲ್ಲು ದೇವಸ್ಥಾನ ತಲುಪುತ್ತದೆ. ಪೂಜೆಗೂ ಮೊದಲು ಮತ್ತು ನಂತರ ಎಲ್ಲಾ ವೀರಗಾರರು ಭಕ್ತಿಯ ಸಾಹಸ ಪ್ರದರ್ಶನ ಎಲ್ಲರ ಕಣ್ಮನ ಸೆಳೆಯುತ್ತದೆ. ನೆರೆದಿದ್ದ ಸಾವಿರಾರು ಭಕ್ತರು ದೇವರಿಗೆ ಪೂಜೆ ಸಲ್ಲಿಸಿದ ನಂತರವೇ ಉಳಿದ ಕೆಲಸ ಕಾರ್ಯ ನೆರವೇರುತ್ತದೆ.
ಯಲಹಂಕದಲ್ಲಿ ಕರಗ ಉತ್ಸವವೂ ಎರಡು ದಿನ ನಡೆಯುತ್ತದೆ. ಸೋಮವಾರ ಮುಂಜಾನೆ ಹಸಿಕರಗವಾದರೆ ಮಂಗಳವಾರ ರಾತ್ರಿ 12ರ ನಂತರ ಹೂವಿನಕರಗ ರಂಗೇರುತ್ತದೆ. ಹೂವಿನ ಕರಗವನ್ನು ಮಲ್ಲಿಗೆ ಹೂವಿಂದ ಅತ್ಯಂತ ಶ್ರದ್ಧಾಭಕ್ತಿಯಿಂದ ಮಾಡಿ ಹೊರಲಾಗುತ್ತದೆ. ಸುಮಾರು 500 ವರ್ಷಗಳ ಇತಿಹಾಸ ಪ್ರಸಿದ್ದ ಯಲಹಂಕ ಕರಗ ಉತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತುರತೆಯಿಂದ ಕಾಯುತ್ತಿದ್ದಾರೆ.
ಬೆಂಗಳೂರು ಕರಗ, ಹೊಸಕೋಟೆ ಕರಗದ ನಂತರ ಯಲಹಂಕದ ಕರಗವೂ ಅತ್ಯಂತ ಶ್ರದ್ಧಾಭಕ್ತಿಗಳಿಂದ ನೆರವೇರುತ್ತದೆ. ಯಲಹಂಕ ಊರ ಹಬ್ಬದ ಟೈಮ್‌ನಲ್ಲಿ ದ್ರೌಪದಮ್ಮ ಕರಗ ತನ್ನದೇ ಆದ ವಿಶಿಷ್ಠತೆ ಹೊಂದಿರುವುದು ಯಲಹಂಕದಲ್ಲಿನ ವಿಶೇಷ..
Kshetra Samachara
17/05/2022 11:34 am