ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ಬ್ಯಾಂಕಿನಲ್ಲಿ ಕನ್ನಡ ಸೇವೆ ಕಡ್ಡಾಯವಾಗಿಲಿ ಕಸಾಪ ಒತ್ತಾಯ

ಆನೇಕಲ್ : ಜನಕ್ಕೆ ಅವರು ಮಾತನಾಡುವ ಭಾಷೆ ಸೇವೆ ಬಹಳಷ್ಟು ಅವಶ್ಯಕತೆ ಇದೆ ಇದನ್ನು ಮೊದಲು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಕನ್ನಡ ಮಾತನಾಡುವ ಅಧಿಕಾರಿಗಳನ್ನು ಬ್ಯಾಂಕ್ಗಳಲ್ಲಿ ನೇಮಕ ಮಾಡಿ ಕನ್ನಡ ಬೆಳವಣಿಗೆಗೆ ಹಾಗೂ ಉಳಿವಿಗೆ ಸಹಕಾರಿಯಾಗಲಿದೆ.. ಎಂದು ಕನ್ನಡ ಸಾಹಿತ್ಯ ಪರಿಷತ್ ಆನೇಕಲ್ ಅಧ್ಯಕ್ಷ ಅದೂರು ಪ್ರಕಾಶ್ ತಿಳಿಸಿದರು.

ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಮತ್ತು ಕನ್ನಡದಲ್ಲಿ ವ್ಯವಹರಿಸುವ ಬಗ್ಗೆ ತಹಶಿಲ್ದಾರ್ ಕಚೇರಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಗಳನ್ನು ಕರಿಸಿ ಮೊದಲ ಸುತ್ತಿನ ಸಭೆ ನಡೆಸಲಾಯಿತು.

ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಕಸಾಪ ಆನೇಕಲ್ ಅಧ್ಯಕ್ಷ ಪ್ರಕಾಶ್ ಮಾತನಾಡಿ . ಬ್ಯಾಂಕುಗಳಲ್ಲಿ ನೇಮಕ ಮಾಡಿಕೊಳ್ಳುವಾಗ ವಿದ್ಯಾಭ್ಯಾಸ ಹಾಗೂ ಪ್ರತಿಭೆಗಳನ್ನು ನೋಡಿ ಆಯ್ಕೆ ಮಾಡುತ್ತಿದ್ದಾರೆ ಆದರೆ ಹಳ್ಳಿಗಳಲ್ಲಿ ಎರಡು ಕೂಡ ಕೆಲಸಕ್ಕೆ ಬರೋದಿಲ್ಲ ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡಬೇಕು ಇಲ್ಲಿನ ಜನ ಅವಿದ್ಯಾವಂತರಾಗಿದ್ದೂ ಅವರಿಗೆ ಬೇಕಾದ ಭಾಷೆಯಲ್ಲಿ ಮಾತನಾಡಿದರೆ ಮಾತ್ರ ಅವರಿಗೆ ಅರ್ಥ ಆಗುತ್ತೆ , ಇಂತಹ ಪ್ರದೇಶಗಳಿಗೆ ಕನ್ನಡ ಬರುವ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ತಿಳಿಸಿದರು .

Edited By : PublicNext Desk
Kshetra Samachara

Kshetra Samachara

05/05/2022 08:27 pm

Cinque Terre

2.28 K

Cinque Terre

0

ಸಂಬಂಧಿತ ಸುದ್ದಿ