ಆನೇಕಲ್: ಆನೇಕಲ್ ಪಟ್ಟಣದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಪಟ್ಟಣದ ಮಾಧ್ಯಮಿಕ ಪಾಠಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಶಾಸಕ ಬಿ.ಶಿವಣ್ಣನವರು ಉದ್ಘಾಟಿಸಿದರು.
ನಂತರ ಮಾತನಾಡಿದ ಬಿ ಶಿವಣ್ಣ ಅವರು, ನೂತನ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಶುಭವಾಗಲಿ ಅಂತೆಯೇ ಕನ್ನಡ ಕಾರ್ಯಕ್ರಮಗಳು ಉತ್ಕೃಷ್ಟವಾಗಿ ನಡೆಯಲಿ ಇದಕ್ಕೆ ಬೇಕಾಗಿರುವಂತಹ ಎಲ್ಲಾ ಸಹಕಾರವನ್ನು ಹೆಚ್ಚಾಗಿ ನೀಡುತ್ತೇನೆ ಕನ್ನಡ ಭಾಷೆ ನೆಲ ಜಲ ಇವುಗಳಿಗೆ ಕನ್ನಡ ನಾಡಿನ ಜನತೆ ಎಂದಿಗೂ ಕೂಡ ಹಿಮ್ಮುಖರಾಗುವುದಿಲ್ಲ ಎಂದು ಹೇಳಿದರು.
ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ ಪ್ರಕಾಶಮೂರ್ತಿ ಅವರು ಮಾತನಾಡಿ, ಗಡಿಭಾಗದಲ್ಲಿ ಕನ್ನಡ ಚಟುವಟಿಕೆಗಳು ಗರಿಗೆದರಿ ಕನ್ನಡದ ಮನಸ್ಸುಗಳು ಶ್ರೀಮತಗೊಳ್ಳಬೇಕು ತಾಲೂಕು ಕೇಂದ್ರದಲ್ಲಿ ಕನ್ನಡ ಭವನ ಮತ್ತು ಎಲ್ಲಾ ವಿದ್ಯಾರ್ಥಿ ವರ್ಗಗಳಿಗೂ ಅನುಕೂಲವಾಗುವಂತಹ ಉನ್ನತ ಗ್ರಂಥಾಲಯವನ್ನು ಶೀಘ್ರವಾಗಿ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ನಿರ್ಮಾಣ ಮಾಡಬೇಕು ಇದರಿಂದ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ ಆಗಲಿದೆ ಎಂದು ನುಡಿದರು. ಇನ್ನು ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಭಾಗಿಯಾಗಿದ್ದರು.
Kshetra Samachara
19/03/2022 08:14 pm