ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತಿರುಮಲಶೆಟ್ಟಿ ಹಳ್ಳಿಯಲ್ಲಿ ವರುಣಾರ್ಭಟ; ನೀರಲ್ಲಿ ಸಿಲುಕಿದ್ದ 40 ಜನರ ರಕ್ಷಣೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿ ಹಳ್ಳಿಯ ಪಾಲಿ‌ ಹೌಸ್ & ಆನಂದ್ ಫಾರ್ಮ್ ಹೌಸ್ ನಲ್ಲಿ ಮಳೆನೀರಿನಿಂದಾಗಿ ಸಿಲುಕಿದ್ದ 40 ಜನರನ್ನು ಹೊಸಕೋಟೆ ತಾಲೂಕು ಆಡಳಿತ, ಎನ್‌ಡಿಆರ್‌ಎಫ್ & ಎಂಇಜಿ ಹಾಗೂ ಯುವಕರ ಅಡ್ವೆಂಚರ್ ತಂಡ ರಕ್ಷಿಸಿದೆ.

ಪಾಲಿಹೌಸ್ ಮತ್ತು ಆನಂದ್ ಫಾರ್ಮ್ ಹೌಸ್‌ ನಲ್ಲಿ ನೂರಾರು ಜನ ಕೆಲಸ ಮಾಡುತ್ತಿದ್ದರು. ಕೆಲವರು ಕೆಲಸ ಮಾಡುತ್ತಿದ್ದಲ್ಲೇ ಉಳಿದುಕೊಂಡಿದ್ದರು. ಸೋಮವಾರ ರಾತ್ರಿ ಸುರಿದ ಭಾರಿ ಮಳೆ ಪ್ರವಾಹ ರೂಪದಲ್ಲಿ ಪಾಲಿ ಹೌಸನ್ನು ಆವರಿಸಿಕೊಂಡಿತ್ತು. ನೀರಲ್ಲಿ ಸಿಲುಕಿಕೊಂಡವರನ್ನು ಎನ್‌ಡಿಆರ್‌ಎಫ್, ಎಂಇಜಿ ಹಾಗೂ ಯುವಕರ ಅಡ್ವೆಂಚರ್‌ ತಂಡ ಮಹಿಳೆಯರು, ಮಕ್ಕಳು & ಪುರುಷರು ಸೇರಿದಂತೆ ಒಟ್ಟು 40 ಜನರನ್ನು ರಕ್ಷಿಸಿದೆ.

ಹೊಸಕೋಟೆ ತಾಲ್ಲೂಕು ಆಡಳಿತಕ್ಕೆ ಅಹವಾಲು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ತಾಲ್ಲೂಕು ವಿಪತ್ತು ತಂಡ ಶೀಘ್ರ ಕಾರ್ಯೋನ್ಮುಖವಾಯ್ತು. ಎನ್‌ಡಿಆರ್‌ಎಫ್, ಎಂಇಜಿ ಹಾಗೂ ಅಡ್ವೆಂಚರ್‌ ತಂಡದ ಜೊತೆ ಸಮಾಲೋಚಿಸಿ ಕಾರ್ಯಾಚರಣೆ ನಡೆಸಿ ನೀರಿನಲ್ಲಿ ಸಿಲುಕಿದ್ದ ಎಲ್ಲರನ್ನು ರಕ್ಷಿಸಿದೆ.

-ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ

Edited By : Shivu K
Kshetra Samachara

Kshetra Samachara

07/09/2022 10:09 am

Cinque Terre

3.87 K

Cinque Terre

0

ಸಂಬಂಧಿತ ಸುದ್ದಿ