ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಕೆರೆಗಳೆಲ್ಲ ತುಂಬಿ ಹರಿಯುತ್ತಿವೆ. ಈ ಹಿನ್ನಲೆ ಯಶವಂತಪುರ ಕ್ಷೇತ್ರದ ಎಲ್ಲಾ ಕೆರೆಗಳು ಮದುವಣಗಿಂತಯಂತೆ ಕಂಗೊಳಿಸುತ್ತಿವೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ, ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಈಗಾಗ್ಲೆ 5 ನದಿಗಳಿಗೆ ಶಾಸ್ತ್ರೋಕ್ತವಾಗಿ ಬಾಗಿನ ಅರ್ಪಿಸಿದ್ದಾರೆ. ಇಂದು ಭೀಮನ ಕುಪ್ಪೆ ಕೆರೆ ತುಂಬಿ ಹರಿಯುತ್ತಿದೆ. ನೋಡಲು ಬಹಳ ಸುಂದರವಾಗಿ ಕಂಗೊಳಿಸುತ್ತಿರುವ ಈ ನದಿಯ ಸುತ್ತ ಸಿಂಗಾರ ಮಾಡಿ, ಡೊಳ್ಳು ಕುಣಿತ, ವೀರಗಾಸೆ, ದೇವರ ಮೆರವಣಿಗೆ ಮಾಡ್ತಾ, ಭೀಮನಕುಪ್ಪೆ ಗ್ರಾಮದಲ್ಲಿ ಒಂದು ತರಹ ಹಬ್ಬದ ವಾತಾವರಣ ಮನೆ ಮಾಡಿತ್ತು. ಇಡಿ ಗ್ರಾಮಸ್ಥರು ಕೆರೆಯ ಹತ್ತಿರಾ ನೆರೆದಿದ್ರು, ಇವರ ಸಮ್ಮುಖದಲ್ಲಿ ಸಚಿವರು ಕೆರೆಗೆ ಬಾಗಿನ ಅರ್ಪಿಸಿದ್ದಾರೆ.
ಒಟ್ನಲ್ಲಿ ಸುತ್ತ-ಮುತ್ತಾ ಎಲ್ಲಾ ಕೆರೆಗಳು ತುಂಬಿರೋದ್ರಿಂದ ಇನ್ನೂ ವ್ಯವಸಾಯಕೇನು ತೊಂದರೆಯಾಗಲ್ಲ. ರೈತರು ಕೊರಸಿದ ಬೋರ್ ಗಳಲ್ಲು ಸಹ ನೀರು ತುಂಬಿ ಹರಿಯುತ್ತಿದೆ. ಆದ್ರೆ ಕೆರೆಗಳಲ್ಲಿ ನೀರು ತುಂಬಿರುವುದು ಸಂತಸದ ವಿಷಯ, ಯಾರು ಸಹ ಈಜಾಡಲು ಹೋಗಬೇಡಿ, ಕೆರೆಗಳೆಲ್ಲ ತುಂಬಿ ಹರಿಯುತ್ತಿದೆ. ಎಚ್ಚರದಿಂದ ಇರಿ ಅಂತ ಹೇಳ್ತಾ..
ರಂಜಿತಾ ಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..
Kshetra Samachara
06/09/2022 10:40 pm