ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿರುಮಶೆಟ್ಟಿಹಳ್ಳಿ ಮಾರ್ಗವಾಗಿ ಚನ್ನಸಂದ್ರಕ್ಕೆ ಸಂಪರ್ಕ ಕಲ್ಪಿಸುವ ದಕ್ಷಿಣ ಪಿನಾಕಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮುಳುಗಡೆಯಾಗಿದ್ದು, ಅಪಾಯಮಟ್ಟದಲ್ಲಿ ನದಿ ಹರಿಯುತ್ತಿದೆ.
ತಿರುಮಶೆಟ್ಟಿಹಳ್ಳಿ, ಸಮೇತನಹಳ್ಳಿ, ಬೋಧನಹೊಸಹಳ್ಳಿ, ದೇವನಗೊಂದಿ, ದೇವಲಾಪುರ, ದೊಡ್ಡದುನ್ನಸಂದ್ರ, ಅನುಗೊಂಡನಹಳ್ಳಿ, ಚಿಕ್ಕತಿರುಪತಿ & ಮಾಲೂರು ಸುತ್ತಮುತ್ತಲ ಹಳ್ಳಿಗಳ ಜನರಿಗೆ ಓಫಾರಂ & ITPL, ಬೆಂಗಳೂರು ನಗರಕ್ಕೆ ಹೋಗಿ ಬರಲು ಸಂಪರ್ಕ ಕಲ್ಪಿಸುವ ಈ ಚನ್ನಸಂದ್ರ ಬ್ರಿಡ್ಜ್ ದಕ್ಷಿಣ ಪಿನಾಕಿನಿ ನದಿ ನೀರಿಂದ ತುಂಬಿ ಹೋಗಿದೆ.
ಇದರಿಂದ ಸಾವಿರಾರು ಸಾಫ್ಟ್‌ವೇರ್ ಉದ್ಯೋಗಿಗಳು, ನೌಕರರು, ಜನಸಾಮಾನ್ಯರು ನೀರನ್ನು ದಾಟಿ ಹೋಗಲಾರದೆ, ಮನೆಗಳಿಗೆ ವಾಪಸ್ ಹೋಗಲಾರದೆ ಪರದಾಡಿದ್ದಾರೆ. ಹೋಗದಿದ್ದರೆ ಕಚೇರಿ ಕೆಲಸ ಮಿಸ್, ಹೋದರೆ ನೀರಲ್ಲಿ ಏನಾದರೂ ಅನಾಹುತವಾದರೆ ಎಂಬ ಭೀತಿಯಿಂದ ಜನ ಮೂಕಪ್ರೇಕ್ಷಕರಾಗಿ ರಸ್ತೆ ದಿಬ್ಬಗಳ ಮೇಲೆ ನಿಂತು ನೋಡುತ್ತಿದ್ದದ್ದು ಸಾಮಾನ್ಯವಾಗಿತ್ತು.
ಇದು ಬೆಂಗಳೂರು ನಗರದಲ್ಲಿ ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಮಳೆಯ ಎಫೆಕ್ಟ್. ಇನ್ನು ಎರಡು ಮೂರು ದಿನ ಏನಾದರೂ ಇದೇ ರೀತಿ ಮಳೆಯಾದರೆ ಬೆಂಗಳೂರು ನಗರ & ಬೆಂಗಳೂರು ಗ್ರಾಮಾಂತರ ಪ್ರದೇಶಗಳೆಲ್ಲಾ ಜಲಾವೃತವಾಗವುದರಲ್ಲಿ ಡೌಟೇ ಇಲ್ಲ.
- ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ
Kshetra Samachara
06/09/2022 08:44 pm