ಬೆಂಗಳೂರು: ವಿಪ್ರೋ ಗೇಟ್ ಮುಂಭಾಗದ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ. ಈ ರಸ್ತೆಯಲ್ಲಿ ವಾಹನಗಳು ಸಂಚರಿಸಲಾಗದೆ ಸವಾರರು ಪರದಾಡುವಂತಾಗಿದೆ.
ಅಲ್ಲದೆ, ಜಲಾವೃತಗೊಂಡಿದ್ದ ರಸ್ತೆ ಮಧ್ಯೆಯೇ ಶಾಲಾ ಬಸ್ ಕೆಟ್ಟು ನಿಂತಿದೆ. ಟ್ರಾಫಿಕ್ ಜಾಮ್ ಜೊತೆಗೆ ವಾಹನಗಳು ಕೆಟ್ಟು ನಿಲ್ಲುತ್ತಿದ್ದು, ಮತ್ತಷ್ಟು ಟ್ರಾಫಿಕ್ ಹೆಚ್ಚಾಗುತ್ತಿದೆ. ಇನ್ನು, ಕೆಟ್ಟು ನಿಂತ ಶಾಲಾ ಬಸ್ ಅನ್ನು ರಸ್ತೆ ಬದಿಗೆ ಜನರೇ ತಳ್ಳಿದರು. ಸರ್ಜಾಪುರ ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗಿದ್ದು, ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ.
Kshetra Samachara
05/09/2022 02:40 pm