ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನ ಸರ್ವಜ್ಞನಗರ, ಮಹದೇವಪುರ-ಯಲಹಂಕ ಭಾಗದಲ್ಲಿ ಅಧಿಕಮಳೆ

ಬೆಂಗಳೂರು: ಬೆಂಗಳೂರಿನ ಪೂರ್ವ ಸರ್ವಜ್ಞನಗರ ಮತ್ತು ಮಹದೇವಪುರ, ಯಲಹಂಕ ಭಾಗದಲ್ಲಿ ಅಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿದಸಿದೆ. ಕಳೆದ ರಾತ್ರಿಯಿಡೀ ಮತ್ತು ಇಂದು ಮುಂಜಾನೆವರೆಗೂ ಸುರಿದ ಭಾರಿ ಮಳೆಗೆ ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ನೀರಿನಿಂದ ಜಲಾವೃತವಾಗಿ ಜನ, ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದ್ದಾರೆ.‌ ಯಲಹಂಕ ವ್ಯಾಪ್ತಿಯ ಶಿವಕೋಟೆ, ಸೊಂಡೇಕೊಪ್ಪ, ತಾವರೆಕೆರೆಗಳಲ್ಲು ಜೋರು ಮಳೆಯಾಗಿದೆ.

ಹವಾಮಾನ ಇಲಾಖೆ ಸ್ಪಷ್ಟಪಡಿಸಿರುವ ಮಳೆ ಪ್ರಮಾಣ

ಮಾರತ್ತಹಳ್ಳಿ-87.5mm

ದೊಡ್ಡನಕ್ಕುಂದಿ-70mm

ವರ್ತೂರು-83.5mm

ಬೆಳ್ಳಂದೂರು-69.5mm

ಹಾಲನಾಯಕನಹಳ್ಳಿ-74mm

HAL ಏರ್ಪೋರ್ಟ್- 66.5mm

ಬೆಳ್ಳಂದೂರು-69.5mm

HBR layout *ಚೋಳನಾಯಕನಹಳ್ಳಿ-135mm

ಹಂಪಿನಗರ- 66mm

ಬಂಡಿಕೋಡಿಗೆಹಳ್ಳಿ (ಕೆಐಎ)72.5mm

ದಾಸನಪುರ-67.5mm

ಗಂಟಿಗಾನಹಳ್ಳಿ- 65.5mm

ತಾವರೆಕೆರೆ-135.5mm

ಸೊಂಡೆಕೊಪ್ಪ-79mm

ಸಾತನೂರು-65.5mm

ಸಿಂಗನಾಯಕನಹಳ್ಳಿ-68mm

ಹುಸ್ಕೂರು -70mm

ಕಾಚೋಹಳ್ಳಿ-65mm

ಶಿವಕೋಟೆ-65.5 ಮಿಲಿಮೀಟರ್ ಮಳೆಯಾಗಿದೆ

ವರ್ಷದ ವಾಡಿಕೆಯ ಮಳೆ ಈಗಾಗಲೇ ಮುಗಿದಿದೆ. ಸತತವಾಗಿ ಬಿಟ್ಟುಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಬೆಂಗಳೂರು ಮತ್ತು ಬೆಂಗಳೂರು ಸುತ್ತಮುತ್ತ ಭಾರಿ‌ ಮಳೆಯಾಗುತ್ತಿದೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ನಾಶವಾಗುತ್ತಿದೆ. ಇನ್ನು ಎರಡು ಮೂರು ದಿನ ಬೆಂಗಳೂರು ಸುತ್ತಮುತ್ತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್..ಯಲಹಂಕ.

Edited By : Manjunath H D
PublicNext

PublicNext

05/09/2022 01:52 pm

Cinque Terre

23.98 K

Cinque Terre

0

ಸಂಬಂಧಿತ ಸುದ್ದಿ