ಮಹದೇವಪುರ: ನಿನ್ನೆ ರಾತ್ರಿ ಮಹಾಮಳೆಗೆ ಬೆಂಗಳೂರಿನ ಬೆಳ್ಳಂದೂರು, ಸರ್ಜಾಪುರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಜಲಾವೃತ್ತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಮುಖ್ಯ ರಸ್ತೆಯಲ್ಲಿ ಮಳೆ ನೀರಿನ ಅವಾಂತರದಿಂದ ಕಿಲೋಮೀಟರ್ ಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿದೆ, ರಾಜಕಾಲುವೆಗಳ ಒತ್ತುವರಿಯಿಂದಾಗಿ ಮಳೆ ನೀರು ರಸ್ತೆಯ ಮೇಲೆ ಹರಿಯುವಂತಾಗಿದೆ ವಾಹನ ಸವಾರರು ಕಿಡಿಕಾರುತ್ತಿದ್ದಾರೆ..
ಇನ್ನೂ ಕೆಲವು ಕಡೆ ಮಳೆಯಿಂದಾಗಿ ಅಪಾರ್ಟ್ಮೆಂಟ್‌ಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಒಂದು ತಿಂಗಳಲ್ಲಿ ಮೂರನೇ ಬಾರಿ ಈ ಅವಾಂತರ ಸೃಷ್ಟಿಯಾದ್ರೂ ಸ್ಥಳೀಯ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಯಾವುದೇ ಪರಿಹಾರ ಸೂಚಿಸದೇ ಇರುವುದು ವಿಪರ್ಯಾಸ.
ವರದಿ- ಬಲರಾಮ್ ವಿ
PublicNext
31/08/2022 06:25 pm