ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿಗ ಎಲ್ಲಿ ನೋಡಿದ್ರು ನೀರು ತುಂಬಿದೆ. ಮನೆ, ಶಾಲೆ, ಕಾಲೇಜುಗಳಿಗೆ ನೀರು ನುಗ್ಗಿದೆ. ಇನ್ನೂ ಸಹ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಗುಡುಗಿನ ಶಬ್ದಕ್ಕೆ ಭಯಭೀತರಾಗಿದ್ದಾರೆ ನಗರದ ಮಂದಿ. ರಾತ್ರಿಯಾದ್ರೆ ಸಾಕು ಚಾಟ್ಸ್, ಸುತ್ತಾಟ ಅಂತ ಓಡಾಟ ನಡೆಸುತ್ತಿದ್ದ ಮಂದಿ ಸದ್ಯ ಮನೆ ಸೇರಿಕೊಂಡರೆ ಸಾಕಪ್ಪ ಎಂಬ ಮನೋಭಾವದಲ್ಲಿದ್ದಾರೆ.
ವಿಜಯನಗರದ ಸಮೀಪದಲ್ಲಿರುವ ಚಂದ್ರಲೇಔಟ್ ನಲ್ಲಂತು ರಸ್ತೆಗಳೆಲ್ಲಾ ಕೆರೆಗಳಂತಾಗಿವೆ. ವಾಹನ ಸವಾರರು ಸಂಚರಿಸಲಾಗದೇ ಪರದಾಟ ಅನುಭವಿಸಿದ್ದಾರೆ. ರಸ್ತೆಯಲ್ಲಿರುವ ಗುಂಡಿಗಳಿಗೆ ಹೆದರಿ ಗಾಡಿಗಳನ್ನ ನೀರಿನಲ್ಲೇ ತಳ್ಳಿಕೊಂಡು ಹೋಗುತ್ತಿದ್ದಾರೆ. ಮನೆಗಳಿಗೆ ನೀರು ನುಗ್ಗುತ್ತಿದೆ. ಮಕ್ಕಳು ವಯಸ್ಕರರು ಓಡಾಡಲಾಗದೆ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹಬ್ಬದ ಶಾಪಿಂಗ್ ಮಾಡೋದಕ್ಕೂ ಮಳೆ ಬಿಡುತ್ತಿಲ್ಲ. ಅರದಲ್ಲಿಯೂ ನಗರದಲ್ಲಿ ಹೆಚ್ಚು ವಾಹನಗಳು ಸಂಚರಿಸುವ ಕನ್ನಿಂಗ್ ಹ್ಯಾಮ್ ರಸ್ತೆಯೂ ಕೂಡ ಜಲಾವೃತಗೊಂಡಿದೆ. ಒಟ್ಟಿಲ್ಲಿ ಹಬ್ಬದ ಖುಷಿಗೆ ಮಳೆ ತಣ್ಣೀರೆರಚಿದೆ.
Kshetra Samachara
30/08/2022 11:05 am