ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ದೇವನಹಳ್ಳಿ ಸುತ್ತಮುತ್ತ ಧಾರಾಕಾರ ಮಳೆ : ಹೈರಾಣಾದ ಜನ

ಬೆಂಗಳೂರು : ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಸುತ್ತಮುತ್ತ ಧಾರಾಕಾರ ಮಳೆಯಾದ ಹಿನ್ನಲೆ ತಗ್ಗು ಪ್ರದೇಶದಲ್ಲಿಯ ರಸ್ತೆಗಳು ಜಲಾವೃತವಾಗಿವೆ. ನಿನ್ನೆ ಸಂಜೆಯಿಂದಲೇ ಮಳೆಯಾರ್ಭಟ ಶುರುವಾಗಿದ್ದು, ರಾತ್ರಿ ಹಲವು ಸಂಕಷ್ಟ ತಂದೊಡ್ಡಿದೆ.

ಪ್ರಮುಖವಾಗಿ ಬೆಂಗಳೂರು ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ದೇವನಹಳ್ಳಿ ಪ್ರವೇಶದ್ವಾರದಂತಿರುವ ಬೈಪಾಸ್ ತಗ್ಗು ಪ್ರದೇಶಗಳು ಸಮಸ್ಯೆಗಳ ತಾಣವಾಗಿವೆ. ಈ ಸ್ಥಳದಲ್ಲಿ ಬರೋಬ್ಬರಿ ಮೂರು ಅಡಿಗೂ ಹೆಚ್ಚು ಮಳೆ ನೀರು ನಿಂತಿದ್ದರಿಂದ ಬೈಪಾಸ್ ರಸ್ತೆಯಲ್ಲಿ ಆಟೋ ಕಾರು ಮತ್ತು ಬೈಕ್ ಗಳು ಕೆಟ್ಟು ನಿಂತಿವೆ. ಇದರಿಂದಾಗಿ ವಾಹನ ಸವಾರರು ಗಂಟೆಗಟ್ಲೆ ಪರದಾಡಿದ್ದಾರೆ.

ಪ್ರತಿಸಲ ದೇವನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಮಳೆಯಾದರೂ ಇದೇ ಸ್ಥಿತಿ ನಿರ್ಮಾಣವಾಗ್ತಿದೆ. ಬೈಪಾಸ್ ರಸ್ತೆಯ ಅಂಗಡಿ ಮುಂಗಟ್ಟುಗಳಿಗೂ ಮಳೆ ನೀರು ನುಗ್ಗಿ ತೊಂದರೆಗಳಾಗಿವೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ದೇವನಹಳ್ಳಿ ಪುರಸಭೆ ವೈಜ್ಞಾನಿಕವಾಗಿ ಬೈಪಾಸ್ ನೀರು ರಾಜಕಾಲುವೆಗೆ ಸೇರಿ, ವೇಗವಾಗಿ ಹರಿಯುವ ವ್ಯವಸ್ಥೆ ಮಾಡಬೇಕಿದೆ.

-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.

Edited By : Shivu K
Kshetra Samachara

Kshetra Samachara

30/08/2022 08:59 am

Cinque Terre

4.48 K

Cinque Terre

0

ಸಂಬಂಧಿತ ಸುದ್ದಿ