ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಭೋರ್ಗರೆದು ಹರಿದ ರಾಜಕಾಲುವೆ. ರಸ್ತೆಗಳು ಜಲಾವೃತ!

ಬೆಂಗಳೂರು: ಸತತವಾಗಿ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಂಗಳೂರಿನ ಔಟರ್ ರಿಂಗ್ ರೋಡ್ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಸಿಲ್ಕ್ ಬೋರ್ಡ್ ನಿಂದ ಮಾರತ್ ಹಳ್ಳಿ ಕಡೆ ಹೋಗುವ ರಸ್ತೆಯಲ್ಲಿ ನೀರು ತುಂಬಿದ್ದು, ಇದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಅದರಲ್ಲೂ ಬೆಂಗಳೂರಿನ ಸರ್ಕಾರಿ ಹಾಸ್ಪಿಟಲ್ ಮುಂಭಾಗ ಸಂಪೂರ್ಣ ರಸ್ತೆ ನೀರಿನಿಂದ ತುಂಬಿದ್ದು, ವಾಹನಗಳು ಅದೇ ನೀರಿನಲ್ಲಿ ಸಂಚರಿಸುತ್ತಿವೆ. ಇನ್ನೊಂದು ಕಡೆ ಟ್ರಾಫಿಕ್ ಪೊಲೀಸರು ರಸ್ತೆಗಳ ಮೇಲೆ ತುಂಬಿರುವ ನೀರಿನಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು. ಟ್ರಾಫಿಕ್ ಪೊಲೀಸರು ವಾಹನಗಳು ಸುಲಭವಾಗಿ ಹೋಗಲು ವ್ಯವಸ್ಥೆ ಮಾಡಿಕೊಡಲಾಗುತ್ತಿದೆ.

ಇನ್ನೊಂದು ಕಡೆ ಬನ್ನೇರುಘಟ್ಟ ರಸ್ತೆಯ ಹುಳಿಮಾವಿನ ರಾಜಕಾಲುವೆ ಉಕ್ಕಿ ಹರಿಯುತ್ತಿದ್ದು ಇದರಿಂದ ರಸ್ತೆಗಳ ಮೇಲೆ ನದಿಯಂತೆ ರಾಜ್ಯ ಕಾಲುವೆ ನೀರು ಹರಿಯುತ್ತಿದೆ ಇದರಿಂದ ನಿವಾಸಿಗಳು ಹೊರಬರದಂತೆ ಆಗಿದೆ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Manjunath H D
Kshetra Samachara

Kshetra Samachara

04/08/2022 08:09 pm

Cinque Terre

1.56 K

Cinque Terre

0

ಸಂಬಂಧಿತ ಸುದ್ದಿ