ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಕೆರೆ ಕೋಡಿ ಹರಿದಿದೆ. ನಿನ್ನೆ ಇಡೀ ರಾತ್ರಿ ಸುರಿದ ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ಬೂದಿಗೆರೆ ಕೆರೆಯ ಕೋಡಿ ನೀರಲ್ಲಿ ಜನ ಹುಚ್ಚಾಟ ನಡೆಸುತ್ತಿದ್ದಾರೆ.
ಸುಖಾ ಸುಮ್ಮನೆ ಜೋರಾಗಿ ಹರಿಯುತ್ತಿರುವ ಕೆರೆ ಕೋಡಿ ನೀರಲ್ಲಿ ರಸ್ತೆ ದಾಟಲು ಪ್ರಯತ್ನಿಸಿ ಹುಚ್ಚಾಟ ಮಾಡುತ್ತಿದ್ದು ಸ್ವಲ್ಪ ಯಾಮಾರಿದ್ರೆ ಯಮನ ಪಾದ ಸೇರೋದು ಗ್ಯಾರಂಟಿ. ಈಗಾಗಲೇ ಈಜಲು ಹೋಗಿ ಮೂರಕ್ಕು ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಬೂದಿಗೆರೆ ಕೆರೆಕೋಡಿ ಬಳಿ ಪೊಲೀಸರು ಕೆರೆಕೋಡಿ ನೀರಿಗೆ ಜನರನ್ನ ಬಿಡದೆ ಬಂದೋಬಸ್ತ್ ಮಾಡಬೇಕಿದೆ. ಇಲ್ಲವಾದರೆ ಕೆರೆಕೋಡಿ ಬಳಿ ಅಪಾಯ ಕಟ್ಟಿಟ್ಟ ಬುತ್ತಿ..
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..
PublicNext
03/08/2022 05:51 pm