ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾತ್ರೋ ರಾತ್ರಿ‌ ಚಿರತೆ ಪ್ರತ್ಯಕ್ಷ: ಜನರನ್ನು ಬೆಚ್ಚಿಬೀಳಿಸಿದ ಭಯಾನಕ ದೃಶ್ಯ

ರಿಪೋರ್ಟರ್- ರಂಜಿತಾಸುನಿಲ್

ಬೆಂಗಳೂರು: ಬನ್ನೇರುಘಟ್ಟ ಸಮೀಪದ ಬೈರಪ್ಪನಹಳ್ಳಿ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ರಾತ್ರಿ ವೇಳೆಯಲ್ಲಿ ಊರಿನಲ್ಲಿ ಬೇಟೆಗಾಗಿ ಹುಡುಕಾಡಿದೆ. ಆ ಎಲ್ಲಾ ದೃಶ್ಯಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರೆಲ್ಲ ಇದ್ರಿಂದ ಭಯಭೀತರಾಗಿದ್ದಾರೆ.‌

ಸಿಸಿಟಿವಿ ದೃಶ್ಯಗಳನ್ನ ನೋಡಿ ಸುತ್ತಮುತ್ತ ಇರುವ ಗ್ರಾಮದ‌ ಜನರಲ್ಲೂ ಕೂಡ ಆತಂಕ ಮನೆಮಾಡಿದೆ. ಹೊಲ-ಗದ್ದೆಗಳಲ್ಲಿ ಕೆಲಸ ಮಾಡ್ತೇವೆ. ಆ ವೇಳೆಯಲ್ಲಿ ಏನಾದ್ರು ಆದ್ರೆ ಯಾರು ಹೊಣೆ. ಏನಾದ್ರು ದುರ್ಘಟನೆ ನಡೆಯುವ ಮುನ್ನ ಚಿರತೆಯನ್ನು ಬಂಧಿಸಬೇಕು ಎಂದು, ಅರಣ್ಯಾಧಿಕಾರಿಗಳಲ್ಲಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಈಗಾಗ್ಲೆ ಚಿರತೆಗಾಗಿ ಶೋಧಕಾರ್ಯ ಮುಂದುವರೆದಿದೆ.

Edited By : Nagesh Gaonkar
PublicNext

PublicNext

30/07/2022 09:29 pm

Cinque Terre

47.48 K

Cinque Terre

2

ಸಂಬಂಧಿತ ಸುದ್ದಿ