ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದ 6 ವರ್ಷ ಪ್ರಾಯದ ವನ್ಯ ಎಂಬ ಹುಲಿಯು ಬಹು ಅಂಗಾಂಗಳ ವೈಪಲ್ಯದಿಂದ ಶುಕ್ರವಾರ ಮೃತಪಟ್ಟಿದೆ. ಹುಲಿ ದಿನದಂದೇ ವನ್ಯ ಮೃತಪಟ್ಟಿದೆ. ಈ ಘಟನೆಯು ಉದ್ಯಾನದ ಸಿಬ್ಬಂದಿಯನ್ನು ದುಃಖಿತರನ್ನಾಗಿಸಿದೆ.
ಬನ್ನೇರುಘಟ್ಟ ಉದ್ಯಾನದ ಬಿಳಿ ಹುಲಿ ವನ್ಯಾ ಕಳೆದ ಆರು ವರ್ಷಗಳ ಹಿಂದೆ ಜೈವಿಕ ಉದ್ಯಾನದ ಸುಭದ್ರಳಿಗೆ ಜನಿಸಿತ್ತು. ಏಪ್ರಿಲ್ 22ರಿಂದ ಹುಲಿಯು ಅನಾರೋಗ್ಯದಿಂದ ಬಳಲುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
PublicNext
30/07/2022 08:58 pm