ಬೆಂಗಳೂರು: ನಗರದ ಹಳೆ ಮದ್ರಾಸ್ ರಸ್ತೆಯ ಬೆನ್ನಿಗಾನಹಳ್ಳಿಯ RMZ ಇಂಫಾನಿಟಿ ಕಂಪನಿಯ ಕಾಂಪೌಂಡ್ ನಲ್ಲಿ ನಾಗರ ಹಾವು ಕಾಣಿಸಿಕೊಂಡಿತು!
ಇಲಿ ಬೋನು ಒಳಗಡೆ ಇದ್ದ ನಾಗರ, ಜನರನ್ನು ಕಂಡಾಕ್ಷಣ ಎಡೆ ಎತ್ತಿ ಭುಸ್ ಗುಟ್ಟಿತು. ಇಲಿ ಹಿಡಿಯಲು ಬಂದ ನಾಗಪ್ಪ ತಾನೇ ಬೋನ್ ನಲ್ಲಿ ಸಿಕ್ಕಿ ಹಾಕಿ ಕೊಂಡಿದ್ದ. ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಪೂರ್ವ ವಲಯ ವನ್ಯಜೀವಿ ಸಂರಕ್ಷಕರು, ಹಲವು ಹೊತ್ತು ಹರಸಾಹಸ ಪಟ್ಟು ಕಡೆಗೂ ನಾಗರ ಹಾವಿಗೆ ಗಾಯವಾಗದಂತೆ ಜಾಗರೂಕತೆಯಿಂದ ಬೋನಿನಿಂದ ಬಂಧಮುಕ್ತಗೊಳಿಸಿದರು. ಬಳಿಕ ಸುರಕ್ಷಿತ ತಾಣದಲ್ಲಿ ಉರಗವನ್ನು ಬಿಡಲಾಯಿತು.
Kshetra Samachara
22/06/2022 08:22 pm