ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೋಡಿಬಿದ್ದ ಕಾಕೋಳುಕೆರೆ ಈಗ ಪ್ರವಾಸಿ ತಾಣವಾಗಿದೆ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಕಾಕೋಳು ಗ್ರಾಮದ ಕೆರೆ ಭರ್ತಿಯಾಗಿ ಕೋಡಿ ಹರಿದಿದೆ. ಮುಂಗಾರು ಪೂರ್ವ ಮಳೆ ವೇಳೆ ಕೆರೆಗಳು ಭರ್ತಿಯಾಗಿದ್ದವು.

ಇದೀಗ ಮೇ ಮತ್ತು ಜೂನ್ ತಿಂಗಳ ಮಳೆಗೆ ಯಲಹಂಕ ತಾಲೂಕಿನ ಹಲವು ಕೆರೆ ಕೋಡಿಬಿದ್ದಿವೆ. ರಾಜಾನುಕುಂಟೆ ಹೆಸರಘಟ್ಟ ರಸ್ತೆ ಕಾಕೋಳು ಗ್ರಾಮದ ಕೆರೆ ಅರ್ಕಾವತಿ ನದಿಪಾತ್ರದ ಕೆರೆಯಾಗಿದೆ.

ಕಳೆದ ವರ್ಷ ಕೆರೆ ತುಂಬಿತ್ತು, ಆದರೆ ಕೋಡಿ ಹರಿದಿರಲಿಲ್ಲ. ಆದರೆ ಈ ಭಾರಿ ಮಳೆ ಪರಿಣಾಮ ಕಾಕೋಳು ಕೆರೆ ಕೋಡಿಬಿದ್ದಿದೆ. ನೀರಿನ ಭೋರ್ಗರೆತ ಮತ್ತು ನೀರಿನ ರಭಸ ವೀಕ್ಷಿಸಲು ಕಾಕೋಳು ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನ ಆಗಮಿಸುತ್ತಿದ್ದಾರೆ.

ಇನ್ನು ಮೂರ್ನಾಲು ದಿನ ಕೋಡಿ ಹರಿಯುವ ಸಾಧ್ಯತೆ ಇದ್ದು, ಕಾಕೋಳು ಕೆರೆಕೋಡಿ ಸದ್ಯ ಜನಾಕರ್ಷಣೆಯ ತಾಣವಾಗಿದೆ.

Edited By : Manjunath H D
Kshetra Samachara

Kshetra Samachara

19/06/2022 11:11 am

Cinque Terre

8.44 K

Cinque Terre

0

ಸಂಬಂಧಿತ ಸುದ್ದಿ