ಬೆಂಗಳೂರು- ಮುಂಬರುವ ಜೂನ್ 5 ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ವಿಭಾಗದ ಸಸ್ಯಕ್ಷೇತ್ರಗಳಿಂದ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲು ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ರವರು ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ನಿರ್ದೇಶನ ನೀಡಿದ್ದಾರೆ.
ಅದರಂತೆ, ಪಾಲಿಕೆಯ ಅರಣ್ಯ ವಿಭಾಗದ ವಿವಿಧ ವಲಯಗಳ ವ್ಯಾಪ್ತಿಯಲ್ಲಿರುವ ಸಸ್ಯಕ್ಷೇತ್ರಗಳಲ್ಲಿ “8X12” ಅಳತೆಯ ವಿವಿಧ ಜಾತಿಯ ಸಸಿಗಳು ಲಭ್ಯವಿದ್ದು, “ವಿಶ್ವ ಪರಿಸರ ದಿನಾಚರಣೆ” ಅಂಗವಾಗಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಗುವುದು. ಈ ಸಂಬಂಧ ಆಸಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿ ಉಚಿತವಾಗಿ ಸಸಿಗಳನ್ನು ಪಡೆದುಕೊಂಡು ಸಸಿಗಳನ್ನು ನೆಟ್ಟು ಪೋಷಣೆ ಮಾಡಬಹುದು.
ಸಸ್ಯಕ್ಷೇತ್ರಗಳ ವಿವರ
1. ಕೂಡ್ಲು - 7019196107
2. ಅಟ್ಟೂರು - 9480685196
3. ಜ್ಞಾನಭಾರತಿ ಆವರಣ - 9164042566
4. ಮಲ್ಲತ್ತಹಳ್ಳಿ - 9164042566
5. ಕೆಂಪಾಪುರ - 9480685196
6. ದೊಡ್ಡಬಸ್ತಿ - 9480685196
Kshetra Samachara
02/06/2022 06:43 pm