ಬೆಂಗಳೂರು: ವಿಕಾಸ್ ಸೌಧದಲ್ಲಿ ನಿಲ್ಲಿಸಿದ ಕಾರ್‌ವೊಂದರಲ್ಲಿ ಹಾವು ಕಾಣಿಸಿಕೊಂಡಿದೆ. ಈ ಹಿನ್ನಲೆ ಹೆದರಿದ ಮಾಲೀಕರು, ಜನರು ಕೂಡಲೇ ವನ್ಯಜೀವಿ ಸಂರಕ್ಷರನ್ನು ಕರೆದಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಪೂರ್ವ ವಲಯದ ಅರಣ್ಯ ಘಟಕದ ಮೋಹನ್ ಹಾವನ್ನು ಸುರಕ್ಷಿತವಾಗಿ ಹಿಡಿಯಲು ಹರಸಹಾಸಪಟ್ಟಿದ್ದಾರೆ. ಕಾರಿನಲ್ಲಿದ್ದ ಹಾವನ್ನು ನಿಧಾನವಾಗಿ ಹೊರತೆಗೆದು ಯಾವುದೇ ಗಾಯವಾಗದಂತೆ ಸೂಕ್ತವಾದ ಸ್ಥಳಕ್ಕೆ ಬಿಡಲಾಗಿದೆ.
ಪೂರ್ವವಲಯದ ಪ್ರೆಸರ್ ಟೌನ್ ಪೊಲೀಸ್ ಸ್ಟೇಷನ್ ಮುಂಭಾಗದ ಲಾಜರ್ ರಸ್ತೆಯ ಮೆನ್ಸ್ ಸೆಲೂನ್‌ನಲ್ಲಿ ಕೆರೆ ಹಾವು ಕಾಣಿಸಿಕೊಂಡಿದೆ. ಹಾವು ಕಂಡ ಕೂಡಲೇ ಪೂರ್ವವಲಯದ ವನ್ಯಜೀವಿ ಸಂರಕ್ಷಕರು ಬಿಬಿಎಂಪಿ ಅರಣ್ಯ ಘಟಕದಿಂದ ಬಂದಿದ್ದಾರೆ. ಹಾವು ಹಿಡಿಯಲು ಹೋದಾಗ ಆ ಹಾವು ಅವರ ಕಾಲಿಗೆ ಸುತ್ತಿಕೊಂಡಿತ್ತು. ನಂತರ ಅದನ್ನು ನಿಧಾನವಾಗಿ ಬಿಡಿಸಿ ರಕ್ಷಣೆ ಮಾಡಿ ಸೂಕ್ತವಾದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಇನ್ನೂ ಪೂರ್ವವಲಯದ ಹೆಬ್ಬಾಳದ ಬಾಬ್ಟಿಸ್ಟ್ ಆಸ್ಪತ್ರೆಯ ಹಿಂಭಾಗದ ಚೋಳನಾಯಕನಹಳ್ಳಿಯ ಮನೆಯೊಂದರ ಅಡುಗೆ ಮನೆಯಲ್ಲಿ ಇದಂತಹ ಕೆರೆ ಹಾವನ್ನು ಕೂಡ ವನ್ಯಜೀವಿ ಸಂರಕ್ಷಕರು ರಕ್ಷಣೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
Kshetra Samachara
24/05/2022 08:50 pm