ದೇವನಹಳ್ಳಿ: ನಂದಿ ಪರ್ವತ ಕಣಿವೆಯ ಪಂಚಗಿರಿಗಳಲ್ಲಿ ಪಂಚನದಿಗಳು ಹುಟ್ಟಿ ಹರಿಯುತ್ತವೆ. ಅದರಲ್ಲೂ ನಂದಿಬೆಟ್ಟದ ನೈರುತ್ಯದಲ್ಲಿ ಅರ್ಕಾವತಿ ನದಿ ಮತ್ತು ನಂದಿಬೆಟ್ಟದ ಪೂರ್ವಕ್ಕೆ ಪಾಲಾರ್ ನದಿಗಳು ಹುಟ್ಟಿ ಹರಿಯುತ್ತವೆ. ಅಂದರೆ ಆಗಸದಿಂದ ಬೀಳುವ ಅರ್ಕಾವತಿ ಮತ್ತು ಪಾಲಾರ್ ನದಿ ಮೂಲದ ಮೊದಲ ಹನಿ, ಹನಿ ಹಳ್ಳವಾಗಿ, ಕಾಲುವೆ ರೂಪ ಪಡೆದು, ಝರಿಯಾಗಿ, ಹೊಳೆಯುತ್ತ ಹೀಗೆ ಹಾಲಿನ ನೊರೆಯಂತೆ ಹರಿಯುತ್ತದೆ. ಅದಕ್ಕಾಗಿಯೇ ಇದನ್ನು ಪಾಲ್ ನದಿ- ಹಾಲಿನ ನೊರೆಯ ನದಿ ಪಾಲಾರ್ ನದಿ ಎಂದು ಕರೆಯುತ್ತಾರೆ.
ಪುರಾಣದಲ್ಲಿ ಶಿವ ಪಾರ್ವತಿಯರ ನಡುವೆ ಮನಸ್ತಾಪವಾಗಿ ಪಾರ್ವತಿದೇವಿ ತವರಿಗೆ ಸೇರಿಕೊಂಡಿದ್ದರು. ಹೆಂಡತಿ ಕೊರಗಿನಿಂದ ಊಟ ನೀರಿಲ್ಲದ ಹಸಿವಿನಿಂದ ಧಣಿದಿದ್ದರು ಎಂಬ ವಿಷಯ ಗೊತ್ತಾಗಿ ಶಿವನ ಬಂಟ ನಂದಿ ಹಾಲ ನೊರೆಯನ್ನೆ ಹರಿಸಿದರಂತೆ. ನಂದಿ- ಹಸಿವಿನಿಂದ ಕಾಲುವೆಯಂತೆ ಹರಿದ ಹಾಲನ್ನು ಸೇವಿಸಿದ ಶಿವನ ಹೊಟ್ಟೆ ತುಂಬಿತಂತೆ ಎಂದು ಪುರಾಣ ಹೇಳುತ್ತದೆ.
ಹೀಗೆ ನಂದಿಬೆಟ್ಟದ ಮೇಲೆ ಬೀಳುವ ನೀರು ಪುರಾಣ ಮತ್ತು ವಾಸ್ತವಿಕವಾಗಿ ಹಾಲನೊರೆಯಂತೆ ಹರಿಯುತ್ತದೆ ಮತ್ತು ಹರಿಯುತ್ತಿದೆ ಎಂಬುದನ್ನು ನಾವು ಈ ವಿಡಿಯೋದಲ್ಲಿ ಕಾಣುತ್ತಿದ್ದೇವೆ. ಮಂಗಳವಾರ ಬಿದ್ದ ಮಳೆಗೆ ನಂದಿಬೆಟ್ಟ ಮತ್ತೆ ಘತಕಾಲದ ಪುರಾಣದ ವೈಭವವನ್ನು ಮರುಕಳಿಸುವಂತೆ ಕಂಡು ಬಂದಿತು. ನಂದಿಬೆಟ್ಟದಲ್ಲಿನ ಮಳೆ ನದಿ ರೂಪ ಪಡೆದು ಪಾಲಾರ್ ನದಿಯಾಗಿ ಹರಿಯುತ್ತಿದೆ. ಹಾಲು ಜೀವಕ್ಕೆ ಆಧಾರ ಮಳೆ ಮನುಷ್ಯನ ಜೀವನಕ್ಕಾಧಾರ. ಮಳೆ ಜೀವಜಲವಾಗಿ ಹೀಗೆ ಹರಿಯುತ್ತಿರುವುದನ್ನು ಕಣ್ತುಂಬಿಕೊಳ್ಳುವದೇ ಪರಮಾನಂದ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.
PublicNext
19/05/2022 12:47 pm