ಆನೇಕಲ್ : ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚೌಡರೆಡ್ಡಿ ವೃತ್ತದ ಗಣಪತಿ ದೇವಾಲಯ ಪಕ್ಕದಲ್ಲಿ ಹಳೆಯ ಮರವಿದ್ದು ಒಣಗಿ ಹೋಗಿರುವ ಕೆಲವು ಕೊಂಬೆಗಳನ್ನು ತೆರವು ಮಾಡುವಂತೆ ಒತ್ತಾಯಿಸಿ ಸ್ಥಳೀಯರು ವಲಯ ಅರಣ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಆನೇಕಲ್ ಪಟ್ಟಣದ ಚೌಡರೆಡ್ಡಿ ವೃತ್ತದಲ್ಲಿ ಹಲವಾರು ವಿದ್ಯಾಸಂಸ್ಥೆಗಳಿದ್ದು ಪ್ರತಿನಿತ್ಯ ಸಾವಿರಾರು ಮಂದಿ ಓಡಾಡುತ್ತಾರೆ. ಇದೇ ಜಾಗದಲ್ಲಿ ಕೊಂಬೆಗಳು ಬಾಗಿದ್ದು ಮಳೆ-ಗಾಳಿಗೆ ಬೀಳುವ ಸಂಭವ ಹೆಚ್ಚಾಗಿದೆ ಹೀಗಾಗಿ ಕೊಂಬೆಗಳನ್ನು ತೆರವು ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ
ಇನ್ನು ಮರದಕೊಂಬೆ ಯಾವಾಗಬೇಕಾದರೂ ಬೀಳುವಂತಹ ಪರಿಸ್ಥಿತಿಯಲ್ಲಿ ಇದ್ದು ಮರದಲ್ಲಿರುವ ಕೊಂಬೆಗಳನ್ನು ತೆರವು ಮಾಡುವಂತೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ ಅಧಿಕಾರಿಗಳೇ ಏನಾದರೂ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಅವಘಡಕ್ಕೆ ಎಡೆಮಾಡಿಕೊಡುತ್ತಿದೆ ಇನ್ನೂದರು ಹೆಚ್ಚುತ್ತು ಕ್ರಮ ಕೈಗೊಳ್ಳಲಿ ಅನ್ನೋದು ನಮ್ಮ ಆಶಯ.
Kshetra Samachara
18/05/2022 10:45 pm