ಬೆಂಗಳೂರು: ನಗರದಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಅಲ್ಲಲ್ಲಿ ವಿದ್ಯುತ್ ಕಂಬಗಳು ಬಿದ್ದು, ವಿದ್ಯುತ್ ಕಡಿತಗೊಂಡಿದೆ. ಮರಗಳು ನೆಲ ಕಚ್ಚಿವೆ, ಜನರು ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಬಿದ್ದ ಮರಗಳನ್ನು ಇನ್ನೂ ತೆರವು ಮಾಡಿಲ್ಲ. ಬೆಳೆಗಳಂತೂ ನೀರುಪಾಲಾಗಿದೆ.
ನಿನ್ನೆ ಬಿರುಗಾಳಿ- ಜೋರುಮಳೆಯಿಂದಾಗಿ ಭಾರಿ ಅನಾಹುತವೇ ಸಂಭವಿಸಿದೆ. ಬೆಂಗಳೂರು ದಕ್ಷಿಣ ಗ್ರಾಮಾಂತರದ ಆನೆಪಾಳ್ಯ, ಕುವೆಂಪುನಗರ, ಗಂಗಸಂದ್ರ ಸಹಿತ ಹಲವಾರು ಹಳ್ಳಿಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ನಿನ್ನೆ ಸಂಜೆ ಆರು ಗಂಟೆಗೆ ಹೋದ ಕರೆಂಟ್ ಇನ್ನೂ ಬಂದಿಲ್ಲ. ಮಕ್ಕಳಿರುವವರ ಗತಿ ಏನು ? ಅಡುಗೆ ಮಾಡಿಕೊಂಡು ತಿನ್ನಲಾಗ್ದೆ, ನಿದ್ರೆ ಮಾಡಲೂ ಆಗದೆ ಪರದಾಡುತ್ತಿದ್ದಾರೆ. ಹಾಗಾದ್ರೆ, ಸ್ಥಳೀಯರು ಈ ಬಗ್ಗೆ ಏನು ಹೇಳುತ್ತಾರೆ ಕೇಳೋಣ ಬನ್ನಿ...
ಸಾರ್ವಜನಿಕರು ಇಷ್ಟು ಪರದಾಡ್ತಿದ್ರೂ ಸಹ ಯಾವ ಪಂಚಾಯಿತಿ ವಿಭಾಗದಿಂದ ಯಾರೂ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ. ಅಧಿಕಾರಿಗಳೂ ಇತ್ತ ಸುಳಿದಾಡಿಲ್ಲ. ವಿದ್ಯುತ್ ಇಲ್ಲದೆ ಅಂಗಡಿಯಲ್ಲಿ ವ್ಯಾಪಾರ ಮಾಡಲಾಗದೆ ವ್ಯಾಪಾರಸ್ಥರು ಚಿಂತೆಯಲ್ಲಿದ್ದಾರೆ. ಒಟ್ಟಿನಲ್ಲಿ ಇಷ್ಟೆಲ್ಲ ಆಗಿದ್ರೂ ವೋಟ್ ಹಾಕಿಸಿಕೊಂಡು ಗೆದ್ದ ಪುಣ್ಯಾತ್ಮರು ಈವರೆಗೂ "ನಾಪತ್ತೆ"ಯಾಗಿದ್ದಾರೆ.
Kshetra Samachara
09/05/2022 08:46 pm