ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ; ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಭಾನುವಾರ ಅಸಾನಿ ಚಂಡಮಾರುತವಾಗಿ ರೂಪುಗೊಂಡಿದ್ದು, ಗಾಳಿಯು ಆಗ್ನೇಯದಿಂದ ವಾಯುವ್ಯದ ಕಡೆಗೆ ಗಂಟೆಗೆ 110 ಕಿ.ಮೀ. ವೇಗದಲ್ಲಿ ರಭಸದಿಂದ ಬೀಸುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಮಳೆ ಮತ್ತಷ್ಟು ಬಿರುಸುಗೊಳ್ಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಚಂಡಮಾರುತ ಪರಿಣಾಮ ಕರ್ನಾಟಕದಲ್ಲಿ ಉತ್ತಮ ವರ್ಷಧಾರೆಯಾಗಲಿದ್ದು, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸುರಿಯಲಿದೆ. ಈ ಹಿನ್ನೆಲೆಯಲ್ಲಿ ಇಲಾಕೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ದೊಡ್ಡ ಕಲ್ಲಸಂದ್ರ, ದೊಡ್ಡ ಆಲದ ಮರ ಸೇರಿ ವಿವಿಧೆಡೆ ಆಲಿಕಲ್ಲು ಮಳೆಯಾಗಿದೆ. ಬೆಳಗ್ಗೆಯಿಂದ ಬಿಸಿಲು ಹಾಗೂ ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣ ಇತ್ತು. ನಿನ್ನೆ ಸಂಜೆ ಆಗುತ್ತಿದ್ದಂತೆ ಮಳೆ ಆರಂಭವಾಯಿತು. ಮಳೆಯ ಜತೆಗೆ ಬಿರುಗಾಳಿ ಬೀಸಿದ್ದರಿಂದ 40ಕ್ಕೂ ಅಧಿಕ ಮರಗಳು ಬುಡ ಸಮೇತ ಬಿದ್ದಿವೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಬೊಮ್ಮನಹಳ್ಳಿ ವಲಯದಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದರೂ ಗಾಳಿ ಹೆಚ್ಚಾಗಿದ್ದರಿಂದ ನಗರ, ಕೋಣನಕುಂಟೆ, ಬಿಳೇಕಹಳ್ಳಿ, ಬನ್ನೇರುಘಟ್ಟ ಮುಖ್ಯ ರಸ್ತೆ, ಅಗರ, ವಿಜಯಾ ಬ್ಯಾಂಕ್ ಲೇಔಟ್, ಹುಳಿಮಾವು ಟೀಚರ್ ಕಾಲನಿ, ವೈಟ್ ಫೀಲ್ಡ್ ಸೇರಿ ವಿವಿಧೆಡೆ 5 ಮರಗಳು ಬಿದ್ದಿವೆ. ಆದರೆ, ಪ್ರಾಣಹಾನಿ ಆಗಿರುವುದು ವರದಿಯಾಗಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

ದೊಡ್ಡಕಲ್ಲಸಂದ್ರ, ಹೊರ ವಲಯದ ದೊಡ್ಡ ಆಲದ ಮರ ಬಳಿಯ ಚಂದ್ರಪ್ಪ ಸರ್ಕಲ್ ಸೇರಿ ವಿವಿಧೆಡೆ ಆಲಿಕಲ್ಲು ಮಳೆಯಾಗಿದೆ.

Edited By : Shivu K
Kshetra Samachara

Kshetra Samachara

09/05/2022 02:21 pm

Cinque Terre

3 K

Cinque Terre

0

ಸಂಬಂಧಿತ ಸುದ್ದಿ