ಬೆಂಗಳೂರು: ಭಾನುವಾರ ಸಂಜೆ ಸುರಿದ ಭಾರಿ ಮಳೆಗೆ ಬೆಂಗಳೂರು ದಕ್ಷಿಣದ ಜನರು ತತ್ತರಿಸಿ ಹೋಗಿದ್ದಾರೆ. ಬೆಂಗಳೂರಿನಲ್ಲಿ ಸಂಜೆಯಾದರೆ ಸಾಕು ಮಳೆರಾಯನ ಎಂಟ್ರಿಯಾಗುತ್ತಿದೆ. ಇಂದು ಕೂಡ ಎಂಟ್ರಿ ಕೊಟ್ಟ ಮಳೆರಾಯ ಬೆಂಗಳೂರಿನ ದಕ್ಷಿಣದ ಏರಿಯಾಗಳಲ್ಲಿ ಅಲ್ಲೋಲ-ಕಲ್ಲೋಲ ಪರಿಸ್ಥಿತಿ ಸೃಷ್ಟಿಸಿದ್ದಾನೆ.
ಸಂಜೆ ಸುರಿದ ಭಾರಿ ಗಾಳಿ ಗೆ ಬಿಟಿಎಂ ಲೇಔಟ್‌ನನ 29ನೇ ರಸ್ತೆಯಲ್ಲಿ ಗಾಳಿಯ ರಭಸಕ್ಕೆ ಬೇಕರಿಯ ಶೀಟ್ ಹಾರಿ ಕೆಳಗೆ ನಿಂತಿದ್ದ ಜನರ ಮೇಲೆ ಬಿದ್ದಿತ್ತು.ಅದೃಷ್ಟವಶ ಯಾರಿಗೂ ಯಾವುದೇ ಹಾನಿಯಾಗಿಲ್ಲ.
ಮಳೆಯ ರಭಸಕ್ಕೆ ರಸ್ತೆ ಕಾಣದೆ ಕಾರೊಂದು ಬಿಟಿಎಂ ಲೇಔಟ್ ನ ಮುಖ್ಯ ರಸ್ತೆಯಲ್ಲಿ ಡಿವೈಡರ್ ಗೆ ಗುದ್ದಿಕೊಂಡು ನಿಂತಿತ್ತು.ಕೆಲ ನೇರ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಯಿತು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
08/05/2022 10:41 pm