ಆನೇಕಲ್:ಖಾಸಗಿ ಕುದುರೆ ಫಾರ್ಮ್ ಹೌಸ್ ನಲ್ಲಿ ಚಿರತೆ ದಾಳಿ ಪರಿಣಾಮ ಸಾಕು ಕುದುರೆ ಸಾವನಪ್ಪಿರುವ ಘಟನೆ ರಾಜ್ಯದ ತಮಿಳುನಾಡು ಗಡಿಭಾಗದ ಡೆಂಕಣಿಕೋಟೆ ಸಮೀಪದ ಪೋಲಾಲಂ ಬಳಿ ನಡೆದಿದೆ.
ಬೆಂಗಳೂರು ಮೂಲದ ಅಲಿ ಉಲ್ಲಾಖಾನ್ ಸೇರಿದ ಫಾರಂ ಹೌಸ್ ನಲ್ಲಿ ಸುಮಾರು 20ಕ್ಕೂ ಹೆಚ್ಚು ಕುದುರೆಗಳು ಸಾಕಣೆ ಮಾಡುತಿದ್ದರು. ಎದಿನಂತೆ ಫಾರ್ಮ್ ಹೌಸ್ ನಲ್ಲಿ ಕುದುರೆಯನ್ನು ಕಟ್ಟಿಹಾಕಲಾಗಿತ್ತು ಮೇ1 ನೇ ತಾರೀಖಿನಂದು ಸಿಬ್ಬಂದಿ ಫಾರ್ಮ್ ಗೆ ಬಂದಾಗ ಐದು ವರ್ಷದ ಹೆಣ್ಣು ಕುದುರೆ ಸತ್ತು ಬಿದ್ದಿತ್ತು.ಆತಂಕಗೊಂಡ ಫಾರ್ಮ್ ಹೌಸ್ ಸಿಬ್ಬಂದಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಅರಣ್ಯ ಅಧಿಕಾರಿಗಳು ಕುದುರೆಯನ್ನು ಹುಲಿ ಅಥವಾ ಚಿರತೆ ಕೊಂದಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ತದನಂತರ ಶಂಕೆ ಖಚಿತಪಡಿಸಿಕೊಳ್ಳಲು ಕುದುರೆ ಸತ್ತ ಸ್ಥಳದಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಯಿತು. ಮರು ದಿನ ರಾತ್ರಿ ಅದೇ ಜಾಗಕ್ಕೆ ಚಿರತೆ ಬಂದು ಸತ್ತ ಕುದುರೆಯನ್ನು ಭಕ್ಷಿಸುತ್ತಿರುವುದು ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇನ್ನು ಚಿರತೆಯ ಪತ್ತೆ ಬಗ್ಗೆ ಸುತ್ತಮುತ್ತಲಿನ ಗ್ರಾಮದ ಜನರಿಗೆ ಎಚ್ಚರಿಕೆ ನೀಡಿದ್ದು ಅರಣ್ಯ ಇಲಾಖೆ ರಾತ್ರಿ ವೇಳೆ ಅನಗತ್ಯವಾಗಿ ಹೊಲಗದ್ದೆಗಳ ಕಡೆ ಓಡಾಡದಂತೆ ತಿಳಿಸಿದ್ದಾರೆ.
- ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
05/05/2022 10:03 pm