ಬೆಂಗಳೂರು; ಬೇಸಿಗೆಯಲ್ಲಿ ಬಿಸಿಯ ಬೇಗೆ ತಡೆಯಲಾಗದೆ ಹಾವುಗಳು ತಣ್ಣನೆಯ ಜಾಗವನ್ನ ಹುಡುಕಿಕೊಂಡು ಹೋಗುವುದು ಸಹಜ. ಹೌದು ಬೆಂಗಳೂರು ಪೂರ್ವ ವಲಯದಲ್ಲಿ ಹಾವುಗಳ ಹಾವಳಿ ಜಾಸ್ತಿ ಆಗಿದ್ದು ಸುಮಾರು ೩೦ ಕ್ಕೂ ಹೆಚ್ಚಿನ ಹಾವು ಹಿಡಿಯಲಾಗಿದೆ.ರಾಮಕೃಷ್ಣ ಹೆಗಡೆ ನಗರದ ವಜ್ರಮ್ ಎಸ್ಸಾಸ್ಝ ಅಪಾರ್ಟ್ಮೆಂಟ್ ಗಾರ್ಡನ್ ನಲ್ಲಿ ಹಾವು ಬಂದಿದ್ದು, ಪೈಪ್ ಒಳಗಡೆ ಇದ್ದಂತಹ ನಾಗರ ಹಾವನ್ನು ವನ್ಯಜೀವಿ ಸಂರಕ್ಷಕರು ರಕ್ಷಣೆ ಮಾಡಿ ಸೂಕ್ತವಾದ ಸ್ಥಳದಲ್ಲಿ ಬಿಡಲಾಗಿದೆ.
ಇನ್ನೂ ಹೆಣ್ಣೂರು ಬಾಗಲೂರ್ ಮುಖ್ಯರಸ್ತೆಯ ಕೊತ್ತನೂರು ಕಾಲೇಜು ರೂಮ್ ಒಳಗಡೆ ಇದ್ದಂತಹ ನಾಗರ ಹಾವನ್ನು ರಕ್ಷಣೆ ಮಾಡಿ ಸೂಕ್ತವಾದ ಜಾಗಕ್ಕೆ ಬಿಡಲಾಗಿದೆ.ಸರ್ವಜ್ಞ ನಗರದ ಕ್ಷೇತ್ರದಲ್ಲೂ ಕೂಡ ಎಂಎಲ್ಎ ಆಫೀಸಿನ ಕಾಂಪೌಂಡ್ ಒಂದರಲ್ಲಿ ಹಾವು ಇದ್ದು, ಪೂರ್ವವಲಯದ ವನ್ಯಜೀವಿ ಸಂರಕ್ಷಕರು ಬಿಬಿಎಂಪಿ ಅರಣ್ಯ ಘಟಕ್ಕೆ ಕರೆ ಮಾಡಿ ಹಾವನ್ನ ಹಿಡಿಸಿದ್ದಾರೆ.
PublicNext
23/04/2022 06:46 pm