ಬೆಂಗಳೂರು : ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ.
ರಾಜಕಾಲುವೆ ಕಾಮಗಾರಿ ನಡೆಯುತ್ತಿರುವ ಕಾರಣ ನೀರನ್ನು ತಡೆ ಹಿಡಿದ ಹಿನ್ನೆಲೆಯಲ್ಲಿ ಮಳೆಯ ನೀರು ಮನೆಗಳಿವೆ ನುಗ್ಗಿದೆ. ಇದರಿಂದಾಗಿ ಮನೆಯಲ್ಲಿದ್ದ ಸರಕು ಸರಂಜಾಮುಗಳು ನೀರಲ್ಲಿ ಮುಳುಗಿವೆ.
ಉತ್ತರಹಳ್ಳಿ ವಾಟರ್ ಸಪ್ಲೈ ಬಡಾವಣೆಯ ಮನೆಗಳು ಸೇರಿದಂತೆ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮಾತ್ರವಲ್ಲದೆ ರಾಜಾಜಿ ನಗರ , ವಿದ್ಯಾರಣ್ಯಪುರ, ಜಯನಗರ, ಜೆ.ಪಿ.ನಗರ, ಶೇಷಾದ್ರಿಪುರ, ಶಿವಾನಂದ ಸರ್ಕಲ್, ಮೆಜೆಸ್ಟಿಕ್, ಕೆ.ಆರ್.ಸರ್ಕಲ್, ಶಿವಾಜಿ ನಗರ, ಎಂ.ಜಿ.ರೋಡ್, ಶಾಂತಿ ನಗರ, ಹಲಸೂರು, ಹೀಗೆ ಬಹುತೇಕ ಕಡೆ ಮಳೆಯ ಆರ್ಭಟ ಹೆಚ್ಚಿದೆ.
Kshetra Samachara
15/04/2022 12:00 pm