ಬೆಂಗಳೂರು: ಉತ್ತರ ಭಾಗದ ಯಲಹಂಕ ಸುತ್ತಾಮುತ್ತಾ ರಾತ್ರಿ ಸುರಿದ ಭಾರಿ ಮಳೆಗೆ ಬಿಸಿಲ ಬೇಗೆಯು ತಣಿದು ಭೂಮಿ ತಂಪಾಗಿದೆ. ಸಂಜೆ 6ಗಂಟೆಯ ನಂತರ ಶುರುವಾದ ಬಿರುಗಾಳಿಯ ತೀವ್ರತೆ ಜೋರಾಗಿತ್ತು. ಏಳುಗಂಟೆ, ಎಂಟು ಗಂಟೆಯ ನಂತರ ಮಳೆ ಜೋರಾಗುತ್ತಿದ್ದಂತೆ ಇಡೀ ವಾತಾವರಣ ತಂಪಾಗಿದೆ..
ಫೆಬ್ರವರಿ ನಂತರ ಚಳಿ ಕಡಿಮೆಯಾಗುತ್ತಿದ್ದಂತೆ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಬಿಸಿಲ ಗಾಳಿ ದಿನೇ ದಿನೇ ಜಾಸ್ತಿಯಾಗುತ್ತಲೇ ಇತ್ತು. ಸೊಳ್ಳೆ ಕಾಟವೂ ನಗರದ ಜನರನ್ನು ಜೋರಾಗಿಯೇ ಕಾಡಿತ್ತು. ಇದೀಗ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ನಗರದ ಜನ ಕೂಲ್ ಆಗಿದ್ದಾರೆ. ದಿಢೀರ್ ಅಂತ ಭಾರಿ ಮಳೆಯಿಂದ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಜನ ಮಳೆಯಲ್ಲಿ ನೆನೆದುಕೊಂಡೆ ಸಂಚರಿಸುತ್ತಿದ್ದರು. ಕೆಲವರು ಕೊಡೆಗಳಿಗೆ ಆಶ್ರಯಿಸಿದರೆ, ಕೆಲವರು ಮಳೆಯಲ್ಲಿ ನೆನೆದುಕೊಂಡೇ ಮನೆಗಳತ್ತ ಹೆಜ್ಜೆ ಹಾಕಿದರು.
ಸಂಜೆಯ ಮಳೆಯಿಂದ ಕೆಲವು ಕಡೆ ವಿದ್ಯುತ್ ವ್ಯತ್ಯಯವಾಗಿದ್ದರೆ, ನಗರದ ಕೆಲವು ಕಡೆ ಮರಗಳು ರಸ್ತೆಗೆ ಉರುಳಿದ ಸಂಚಾರಕ್ಕೆ ಅಡ್ಡಿಯಾಗಿದೆ.
PublicNext
14/04/2022 10:46 pm