ಬೆಂಗಳೂರು ದಕ್ಷಿಣ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಮೃಗಾಲಯಗಳಿಗೆ ಹಣಕಾಸು ನೆರವು ನೀಡುವಂತೆ ನಟ ದರ್ಶನ್ ಕರೆ ನೀಡಿದ ಹಿನ್ನೆಲೆಯಲ್ಲಿ ಪ್ರಾಣಿಪ್ರಿಯರು ಕೂಡ ದತ್ತು ಸ್ವೀಕಾರ ಮಾಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ಅದರ ಮುಂದುವರಿದ ಭಾಗವಾಗಿ ಇನ್ನಷ್ಟು ಪ್ರಾಣಿಪ್ರಿಯರು ದತ್ತುಸ್ವೀಕಾರದ ಉದಾರತೆಯನ್ನು ಮೆರೆಯುತ್ತಿದ್ದಾರೆ.
ಹೌದು, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ "ಆಶ್ರಯ ಹಸ್ತ ಟ್ರಸ್ಟ್ " ಒಂದು ವರ್ಷದ ಅವಧಿ ವರೆಗೆ 92 ಪ್ರಾಣಿಗಳನ್ನು ದತ್ತು ಸ್ವೀಕರಿಸಿ, ಮಾನವೀಯತೆ ಮೆರೆದಿದೆ.
"ಆಶ್ರಯ ಹಸ್ತ ಟ್ರಸ್ಟ್ "ನ ದಿನೇಶ್ ಹಾಗೂ ತಂಡ ದತ್ತು ಪಡೆದ ಬಳಿಕ ಬನ್ನೇರುಘಟ್ಟ ಕಾರ್ಯನಿರ್ವಹಣಾಧಿಕಾರಿ ಡಾ. ಸುನಿಲ್ ಪವಾರ್ ಅವರಿಗೆ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭ ದಿನೇಶ್ ಮತ್ತವರ ತಂಡ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಹಣೆ ಮತ್ತು ದೈನಂದಿನ ಸವಾಲುಗಳ ಬಗ್ಗೆ ಮೃಗಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಅಲ್ಲದೆ, ಪ್ರಾಣಿಗಳ ಆಹಾರ ವಿತರಣೆ ಘಟಕ ಮತ್ತು ಆನೆ ಅಡುಗೆ ಮನೆಗೆ ಭೇಟಿ ಮಾಡಿ ಪ್ರಾಣಿ-ಪಕ್ಷಿಗಳಿಗೆ ಆಹಾರ ಪೂರೈಕೆ ಬಗ್ಗೆ ಮಾಹಿತಿ ಪಡೆಯಲಾಯಿತು.
- ಹರೀಶ್ ಗೌತಮನಂದ 'ಪಬ್ಲಿಕ್ ನೆಕ್ಸ್ಟ್' ಆನೇಕಲ್
PublicNext
09/04/2022 10:12 pm