ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿ ಹಲವೆಡೆ ಗಾಳಿ ಸಹಿತ ಮಳೆ ಸಾಧ್ಯತೆ

ಬೆಂಗಳೂರು: ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ವರುಣ ಆರ್ಭಟಿಸುವ ಎಲ್ಲ ಸಾಧ್ಯತೆಗಳು ಇವೆ ಎಂದು ಹವಾಮಾನ ತಜ್ಞರಾದ ಸದಾನಂದ ಅಡಿಗ ತಿಳಿಸಿದ್ದಾರೆ.

ನಗರದ ಆಗಸದಲ್ಲಿ ಬುಧವಾರದಂದು ಮೋಡಗಳು ದಟ್ಟವಾಗಿ ಹರಡಿದ್ದು ಕಂಡುಬಂದವು. ಅಲ್ಲದೆ ಈ ಸಂದರ್ಭದಲ್ಲಿ ನಗರದ ವಿವಿಧ ಭಾಗಗಳಲ್ಲಿ ಬಲವಾದ ಗಾಳಿಯು ಬೀಸಿತ್ತು. ಇದೆಲ್ಲವೂ ಮುಂದಿನ ಕೆಲ ದಿನಗಳಲ್ಲಿ ಪ್ರಿ ಮಾನ್ಸೂನ್ ಮಳೆ ತನ್ನ ಆರ್ಭಟದೊಂದಿಗೆ ನಗರಕ್ಕೆ ಪ್ರವೇಶಿಸಲಿದ್ದಾನೆ ಎಂಬುದರ ಸಂಕೇತವಾಗಿದೆ ಎನ್ನಲಾಗುತ್ತಿದೆ.

ಹವಾಮಾನ ತಜ್ಞರಾದ ಸದಾನಂದ ಅಡಿಗ ಅವರು ಹೇಳುವಂತೆ ಗಾಳಿ ಬೀಸುವ ದಿಕ್ಕಿನಲ್ಲಿ ಆಗುವ ತ್ವರಿತವಾದ ಬದಲಾವಣೆಯು ನಗರಕ್ಕೆ ಹೆಚ್ಚು ಮಳೆಯನ್ನು ತರಲಿದೆ ಎಂದಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಹಲವು ಪ್ರದೇಶಗಳು ಉತ್ತಮ ಮಳೆಯನ್ನು ಪಡೆದಿವೆ. ಕೊಡಗು ಜಿಲ್ಲೆಯ ಮುರ್ನಾಡ್ ಮತ್ತು ನಾಪೋಕ್ಲು ಈಗಾಗಲೇ ಕ್ರಮವಾಗಿ 6 ಹಾಗೂ 5 ಸೆ.ಮೀ ಮಳೆ ಪಡೆದಿದ್ದರೆ ಚಿಕ್ಕಮಗಳೂರಿನ ಬಾಳೆಹೊನ್ನೂರು ಒಂದು ಸೆ.ಮೀ ಮಳೆ ಪಡಿದಿರುವ ವರದಿಯಾಗಿದೆ.

Edited By : Vijay Kumar
Kshetra Samachara

Kshetra Samachara

01/04/2022 03:22 pm

Cinque Terre

578

Cinque Terre

0

ಸಂಬಂಧಿತ ಸುದ್ದಿ